ನೀವು ಏರ್‌ಟೆಲ್ ಗ್ರಾಹಕರಾಗಿದ್ದರೆ ಈ ಸುದ್ದಿ ತಪ್ಪದೆ ಓದಿ – ನಿಮಗೆ ಗೊತ್ತೇ ಇಲ್ಲದ ಕೆಲವು ಸಂಗತಿಗಳನ್ನು ತಿಳಿಯಿರಿ..

ನ್ಯೂಸ್ ಆ್ಯರೋ : ಏರ್‌ಟೆಲ್ ಸಂಸ್ಥೆಯು ದೇಶದ ಎರಡನೇ ದೊಡ್ಡ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿದೆ. ದೇಶದ ಉದ್ದಗಲಕ್ಕೂ ಹರಡಿಕೊಂಡು ಜನಪ್ರಿಯವಾಗಿರುವ ಏರ್‌ಟೆಲ್ ಆಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಈ ಮೂಲಕ ಏರ್‌ಟೆಲ್ ಜಿಯೋ, ವೊಡಾಫೋನ್ ಟೆಲಿಕಾಂ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.
ಅಂದಹಾಗೆ ಏರ್ಟೆಲ್ ಗ್ರಾಹಕರಿಗೆ ಹೊಸ ಹೊಸ ಪ್ಯಾಕೆಜ್, ಅಧಿಕ ಡೇಟಾ ಪ್ರಯೋಜನ, ಆಕರ್ಷಕ ವ್ಯಾಲಿಡಿಟಿಯಂತಹ ಯೋಜನೆಗಳನ್ನು ನೀಡುತ್ತಿದ್ದು ಗ್ರಾಹಕರಿಗೂ ಪ್ರಯೋಜನವಾಗುತ್ತಿದೆ. ಅಲ್ಲದೆ, ಗ್ರಾಹಕರು ತಮ್ಮ ಏರ್‌ಟೆಲ್ ನಂಬರ್‌ನ ಅಕೌಂಟ್ ಬ್ಯಾಲೆನ್ಸ್ ಮಾಹಿತಿ ಪಡೆಯಲು ಬಳಕೆದಾರರಿಗೆ ಆಯ್ಕೆ ನೀಡಿದೆ. ಅದಕ್ಕಾಗಿ ಸಂಸ್ಥೆಯು ಕೆಲವೊಂದು ಉಪಯುಕ್ತ USSD ಕೋಡ್ ನೀಡಿದ್ದು, ಆ ಮೂಲಕ ಗ್ರಾಹಕರು ಡೇಟಾ, ಎಸ್‌ಎಮ್‌ಎಸ್, ಪ್ರೀಪೇಯ್ಡ್ ಪ್ಲ್ಯಾನ್ ವ್ಯಾಲಿಡಿಟಿ ಕುರಿತು ಮಾಹಿತಿ ತಿಳಿಯಬಹುದು.
ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕವು ಸಹ ಯೋಜನೆಯ ಮಾಹಿತಿ ಪಡೆಯಬಹುದು. ಸುಲಭವಾಗಿ ಏರ್‌ಟೆಲ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಅನ್ನೋದಕ್ಕೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.
ನೀವು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಸುಲಭವಾಗಿ ನಿಮ್ಮ ಏರ್‌ಟೆಲ್ ನಂಬರ್‌ನ ಅಕೌಂಟ್ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು. ಅಂಡ್ರಾಯ್ಡ್ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಹಾಗೂ ಐಓಎಸ್ ಬಳಕೆದಾರರು ಆ್ಯಪ್ ಸ್ಟೋರ್’ಗೆ ಹೋಗಿ ಆ್ಯಪ್ ಡೌನ್ಲೋಡ್ ಮಾಡಿ.
ಬಳಿಕ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿ. ಮುಂದೆ, ಅಪ್ಲಿಕೇಶನ್‌ನಲ್ಲಿ ‘ನಿರ್ವಹಿಸು’ ಪುಟವನ್ನು ಟ್ಯಾಪ್ ಮಾಡಿ ಮತ್ತು ‘ಸರ್ವೀಸ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಟಾಕ್ ಟೈಮ್, ಡೇಟಾ ಬ್ಯಾಲೆನ್ಸ್ ಇತ್ಯಾದಿಗಳನ್ನು ಒಳಗೊಂಡಂತೆ ಈ ಪುಟದಲ್ಲಿ ನೀವು ಎಲ್ಲಾ ಸೇವೆಗಳಿಗೆ ಇಲ್ಲಿಯೇ ಪ್ರವೇಶವನ್ನು ಪಡೆಯುತ್ತೀರಿ. ಇಲ್ಲಿ ಡೇಟಾ, ಎಸ್‌ಎಮ್‌ಎಸ್, ಪ್ರೀಪೇಯ್ಡ್ ಪ್ಲ್ಯಾನ್ ವ್ಯಾಲಿಡಿಟಿ ಸೇರಿದಂತೆ ಎಲ್ಲಾ ರೀತಿಯ ಮಾಹಿತಿ ಪಡೆಯಬಹುದು.
ಇನ್ನು USSD ಕೋಡ್ ಮೂಲಕವೂ ಏರ್‌ಟೆಲ್ ಅಕೌಂಟ್ ಬ್ಯಾಲನ್ಸ್ ತಿಳಿಯಬಹುದು. ನಿಮ್ಮ ಏರ್‌ಟೆಲ್ ಸಂಖ್ಯೆಯ ಮುಖ್ಯ ಬಾಕಿಯನ್ನು ಪರಿಶೀಲಿಸಲು, *123# ಅನ್ನು ಡಯಲ್ ಮಾಡಿ, ಕರೆ ಮಾಡಿ. ಈ ಸಮಯದಲ್ಲಿ ನಿಮ್ಮ ಟಾಕ್ ಟೈಮ್ ಪ್ಯಾಕೇಜ್ ಮತ್ತು ಡೇಟಾ ಬ್ಯಾಲೆನ್ಸ್ ಕುರಿತು ಸ್ವಯಂಚಾಲಿತವಾಗಿ ಮಾಹಿತಿ ತೋರಿಸುತ್ತದೆ.
ಏರ್‌ಟೆಲ್ ಟೆಲಿಕಾಂನ ನಿವ್ವಳ ಸಮತೋಲನವನ್ನು ಪರಿಶೀಲಿಸಲು USSD ಕೋಡ್ 12310# ಬಳಸಿ. ನಿಮ್ಮ ನಂಬರ್’ಗೆ ಇರುವ ಆಫರ್ ತಿಳಿಯಲು *121# ಅನ್ನು ಬಳಸಬಹುದು.
ನೀವು ಟಾಕ್ ಟೈಮ್ ಅಥವಾ ಬ್ಯಾಲೆನ್ಸ್‌ಗಾಗಿ ಲೋನ್ ಪಡೆಯಲು ಮತ್ತು ನಿಮ್ಮ ಮುಂದಿನ ರೀಚಾರ್ಜ್‌ನಲ್ಲಿ ಪಾವತಿಸಲು *141# ಅನ್ನು ಬಳಸಬಹುದು. ನಿಮ್ಮ 2G ಇಂಟರ್ನೆಟ್ ಬ್ಯಾಲೆನ್ಸ್ ಪರಿಶೀಲಿಸಲು ಬಯಸಿದರೆ ನೀವು *123*9# ಅನ್ನು ಬಳಸಬಹುದು.