
ನ್ಯೂಸ್ ಆ್ಯರೋ : ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇಂದು ಕೇವಲ ಚಾಟ್ ಮಾಡಲು, ಫೋಟೋ, ವಿಡಿಯೋ ಕಳುಹಿಸಲು ಮಾತ್ರ ಸೀಮಿತವಾಗಿಲ್ಲ. ಇದುಬಿಟ್ಟು ಅನೇಕ ಪ್ರಯೋಜನಗಳಿವೆ. ಭಾರತದಲ್ಲಿ ವಾಟ್ಸ್ಆ್ಯಪ್ ಬಳಕೆದಾರರು ಪ್ಯಾನ್ ಕಾರ್ಡ್ (Pan Card), ಆಧಾರ್ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್ ವಿಮಾ ಪಾಲಿಸಿ ಸೇರಿದಂತೆ ಅನೇಕ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.
ಇದಕ್ಕಾಗಿ MyGov ತನ್ನ ವಾಟ್ಸ್ಆ್ಯಪ್ ಚಾಟ್‌ಬಾಟ್‌ನಲ್ಲಿ ಸೇವೆಯನ್ನು ನೀಡಿದ್ದು, ಇದರ ಸಹಾಯದಿಂದ ‘ಡಿಜಿಲಾಕರ್‘ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರದಂತಹ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಅದು ಹೇಗೆ ಎಂಬ ಸಿಂಪಲ್ ಟ್ರಿಕ್ಸ್ ಇಲ್ಲಿದೆ.
ಹಲವು ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ದೃಡೀಕರಣಕ್ಕೆ ಆಧಾರ್ ಕಾರ್ಡ್ ಅಗತ್ಯವಾಗಿದೆ. ಆದರೆ ಕೆಲವೊಂದು ಬಾರಿ ನಿಮ್ಮ ಬಳಿ ಆಧಾರ್ ಇರುವುದಿಲ್ಲ. ಇಂತಹ ಸಮಯದಲ್ಲಿ ಚಿಂತಿಸಬೇಕಿಲ್ಲ. ಏಕೆಂದರೆ ಇ-ಆಧಾರ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇ-ಆಧಾರ್ ಎಂಬುದು ಆಧಾರ್ ಕಾರ್ಡಿನ ಡಿಜಿಟಲ್ ಆವೃತ್ತಿಯಾಗಿದ್ದು, UIDAI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮುಖಾಂತರ ಆಧಾರ್ ಕಾರ್ಡ್ ಅನ್ನು ಯಾವಾಗ ಬೇಕಿದ್ದರೂ ಡೌನ್‌ಲೋಡ್ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ನಲ್ಲೇ ಸುಲಭವಾಗಿ ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಹಂತ 1: ನಿಮ್ಮ ಸ್ಮಾರ್ಟ್ಫೋನ್ನ ಬ್ರೌಸರ್ನಲ್ಲಿ UIDAI (https://uidai.gov.in) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಹಂತ 2: ಇದರ ಬಳಿಕ ‘Download Aadhaar’ ಆಯ್ಕೆಯನ್ನು ಕ್ಲಿಕ್ ಮಾಡಿ. ಅಥವಾ https://eaadhaar.uidai.gov.in/ ಲಿಂಕ್ ಒಪನ್ ಮಾಡಿ.
ಹಂತ 3: ಈಗ ನಿಮ್ಮ ವೈಯುಕ್ತಿಕ ವಿವರಗಳನ್ನು ನಮೂದಿಸುವ (‘Enter your personal details’) ಆಯ್ಕೆ ಕಾಣಿಸಲಿದ್ದು, ಅದನ್ನು ಕ್ಲಿಕ್ ಮಾಡಿ.
ಹಂತ 4: ಈಗ ‘Regular Aadhaar’ಆಯ್ಕೆಯನ್ನು ಆರಿಸಿ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ, ಪೂರ್ಣ ಹೆಸರು, ಪಿನ್ ಕೋಡ್ ಸಂಖ್ಯೆ ಹಾಗೂ ಇತರೆ ಅಗತ್ಯ ವಿವರಗಳನ್ನು ನಮೂದಿಸಿ. ನಿಮ್ಮ ಬಳಿ m-Aadhaar ಆ್ಯಪ್ ಇದ್ದರೆ, ನೀವು TOTP or OTP ಜನರೇಟ್ ಮಾಡಬಹುದು.
ಹಂತ 5: ಈಗ ‘OTP’ ನಂಬರ್ಗಾಗಿ ರಿಕ್ವೆಸ್ಟ್ ಕಳುಹಿಸಲು ‘Request OTP’ ಅನ್ನು ಕ್ಲಿಕ್ ಮಾಡಿ.
ಹಂತ 6: ಈಗ ನೀವು ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಗಳ OTP ನಂಬರ್ ಅನ್ನು ಕಳುಹಿಸಲಾಗಿರುತ್ತದೆ. ಈ ನಂಬರ್ ಅನ್ನು ನಮೂದಿಸಿ. ಈ ಸರ್ವೆಯ ಬಳಿಕ ಡೌನ್‌ಲೋಡ್ ಆಧಾರ್ ಬಟನ್ ಕ್ಲಿಕ್ ಮಾಡಿ ಕಾರ್ಡ್ನ್ನು ಡೌನ್‌ಲೋಡ್ ಮಾಡಬಹುದು.