1. Home
  2. Tech
  3. News
  4. ನಿಮ್ಮ ವಾಟ್ಸ್ಯಾಪ್ ಅಕೌಂಟ್ ಬ್ಯಾನ್ ಆದಾಗ ಏನು ಮಾಡಬೇಕು? – ರಿಕವರಿ ಮಾಡಲು ಸಿಂಪಲ್ ಟಿಪ್ಸ್ ಇಲ್ಲಿದೆ..

ನಿಮ್ಮ ವಾಟ್ಸ್ಯಾಪ್ ಅಕೌಂಟ್ ಬ್ಯಾನ್ ಆದಾಗ ಏನು ಮಾಡಬೇಕು? – ರಿಕವರಿ ಮಾಡಲು ಸಿಂಪಲ್ ಟಿಪ್ಸ್ ಇಲ್ಲಿದೆ..

ನಿಮ್ಮ ವಾಟ್ಸ್ಯಾಪ್ ಅಕೌಂಟ್ ಬ್ಯಾನ್ ಆದಾಗ ಏನು ಮಾಡಬೇಕು? – ರಿಕವರಿ ಮಾಡಲು ಸಿಂಪಲ್ ಟಿಪ್ಸ್ ಇಲ್ಲಿದೆ..
0

ನ್ಯೂಸ್ ಆ್ಯರೋ : ಜಗತ್ತಿನಲ್ಲಿ ಯಾರೋ ಒಬ್ಬ ವ್ಯಕ್ತಿಗೆ ಬ್ಯಾಂಕ್ ಖಾತೆ ಇಲ್ಲದಿರಬಹುದು. ಆದರೆ ಈ ಟೆಕ್ನಾಲಜಿ ಬಂದ ಮೇಲೆ ಪ್ರತಿಯೊಬ್ಬರು ಈ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ. ಅಷ್ಟೊಂದು ಫೇಮಸ್ ಅಪ್ಲಿಕೇಶನ್ ಇದಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ವಾಟ್ಸಪ್ ನಿಂದ ಎಷ್ಟೆಲ್ಲ ಪ್ರಯೋಜನಗಳು ಇವೆಯೋ ಹಾಗೆಯೇ ಅದರಿಂದ ಅನೇಕರು ತೊಂದರೆಗೆ ಒಳಗಾಗಿದ್ದಾರೆ ಎಂದು ನಾವು- ನೀವು ದಿನನಿತ್ಯ ಪತ್ರಿಕೆಗಳು- ವಾರ್ತೆಗಳಲ್ಲಿ ನೋಡುತ್ತಲೇ ಇರುತ್ತೇವೆ. ಈ ವಾಟ್ಸಪ್ ಬಂದ ಮೇಲೆ ಎಲ್ಲರೂ ಈ ಅಪ್ಲಿಕೇಶನ್ ಗೆ ತುಂಬಾನೇ ಅಡಿಕ್ಟ್ ಆಗಿದ್ದಾರೆ.

ಆದರೆ ಇತ್ತೀಚೆಗೆ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್ಆ್ಯಪ್ ಖಾತೆ ದಿಢೀರ್ ನಿಷೇಧಿತವಾಗುತ್ತಿದ್ದು, ಐಟಿ ನಿಯಮನುಸಾರ ಇಲ್ಲಿಯವರೆಗೂ ಲಕ್ಷಾಂತರ ವಾಟ್ಸ್ಆ್ಯಪ್ ಖಾತೆಗಳು ಬ್ಯಾನ್ ಆಗಿವೆ. ನಿಮ್ಮ ಖಾತೆಯೂ ಈ ನಿಷೇಧವೆಂಬ ನಿರ್ಬಂಧನೆಗೆ ಒಳಗಾಗಿದ್ದರೆ ಅದನ್ನು ಮರು ಪಡೆಯುವ ವಿಧಾನ ಇಲ್ಲಿದೆ.

ಸಾವಿರಾರು ಖಾತೆಗಳನ್ನು ಬ್ಯಾನ್ ಮಾಡುತ್ತಿರುವ ವಾಟ್ಸಪ್..!!

ಪ್ರತಿ ತಿಂಗಳು ವಾಟ್ಸಪ್ ಅಪ್ಲಿಕೇಶನ್ ಸಾವಿರಾರು ಖಾತೆಗಳನ್ನು ಬ್ಯಾನ್ ಮಾಡುತ್ತಿದೆ. ಈ ಬ್ಯಾನ್ ಮಾಡಲಾದ ಖಾತೆಗಳನ್ನು ಮತ್ತೆ ಓಪನ್ ಮಾಡುವುದಕ್ಕೆ ವಾಟ್ಸಪ್ ಮತ್ತೊಂದು ಅವಕಾಶ ನೀಡುತ್ತಿದೆ. ಆ ಫೀಚರ್ ನ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಖಾತೆ ಏನಾದರೂ ಬ್ಯಾನ್ ಆಗಿದ್ದರೆ ಆ ಖಾತೆಗಾಗಿ ಮೇಲ್ಮನವಿ ಸಲ್ಲಿಸಲು ಶೀಘ್ರದಲ್ಲಿಯೇ ಅನುಮತಿ ನೀಡುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ವಾಟ್ಸಪ್ ನ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ವಾಟ್ಸಪ್ ನ ಬೆಂಬಲವನ್ನು ಸಂಪರ್ಕಿಸಲು ಬಳಕೆದಾರರು ಅಪ್ಲಿಕೇಶನ್‌ನಲ್ಲಿಯೇ ಆಯ್ಕೆಯನ್ನು ಮಾಡಬಹುದು.

ಬ್ಯಾನ್ ಆಗಿರುವುದರ ಕುರಿತು ತಿಳಿಯುವುದು ಹೇಗೆ..?

ನಿಮ್ಮ ಖಾತೆ ಏನಾದರೂ ಬ್ಯಾನ್ ಆಗಿದ್ದರೆ, ನೀವು ನಿಮ್ಮ ವಾಟ್ಸಪ್ ಅನ್ನು ತೆರೆದಾಗ “ನಿಮಗೆ ಈ ಖಾತೆಯನ್ನು ವಾಟ್ಸಪ್ ಬಳಸಲು ಅನುಮತಿಯನ್ನು ನೀಡಲಾಗುವುದಿಲ್ಲ’ ಎಂಬ ಸಂದೇಶ ಕಾಣಿಸುತ್ತದೆ ಹಾಗೆಯೇ ನಂತರದಲ್ಲಿ “ನಿಮ್ಮ ಖಾತೆಯ ಚಟುವಟಿಕೆಯು ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನಮಗೆ ಕಂಡು ಬಂದರೆ ನಾವು ನಿಮ್ಮ ಖಾತೆಗಳನ್ನು ಬ್ಯಾನ್ ಮಾಡುತ್ತೇವೆ, ಉದಾಹರಣೆಗೆ ಅದು ಸ್ಪ್ಯಾಮ್ ಒಳಗೊಂಡಿದ್ದರೆ ಅಥವಾ ವಾಟ್ಸಪ್ ನ ಬಳಕೆದಾರರ ಸುರಕ್ಷತೆಗೆ ಆ ಖಾತೆಯು ಅಪಾಯವನ್ನುಂಟುಮಾಡಿದರೆ ಆ ಖಾತೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡುತ್ತೇವೆ” ಎಂದು ನಿಯಮಗಳಲ್ಲಿ ನೀಡಲಾಗಿರುತ್ತದೆ.

ಬ್ಯಾನ್ ಆದ ವಾಟ್ಸಾಪ್ ರಿಕವರಿ ಮಾಡಲು ಹೀಗೆ ಮಾಡಿ

ಪ್ರಸ್ತುತ, ಈ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಆಯ್ಕೆಯನ್ನು ನೀವು ಪಡೆಯುವುದಿಲ್ಲ. ಆದರೆ ನಿಮ್ಮ ಖಾತೆಯನ್ನು ಮರಳಿ ಪಡೆಯಲು ವಿಮರ್ಶೆಯ ವಿನಂತಿಯನ್ನು ಆಯ್ಕೆ ಮಾಡಲು ನೀವು ವಾಟ್ಸಪ್ ನ ಇತ್ತೀಚಿನ ಬೀಟಾ ಆವೃತ್ತಿಯು ಅಪ್ಲಿಕೇಶನ್‌ನಲ್ಲಿ ಬ್ಯಾನ್ ಆದ ಖಾತೆಗಳಿಗೆ ಹಿಂತೆಗೆದುಕೊಳ್ಳುವ ಆಯ್ಕೆಯನ್ನು ತೋರಿಸುತ್ತದೆ ಮತ್ತು ನೀವು ಅದನ್ನು ಒಮ್ಮೆ ಆಯ್ಕೆ ಮಾಡಿದರೆ, ವಾಟ್ಸಪ್ ಸಪೋರ್ಟ್ ತಂಡವು “ತಮ್ಮ ಸೇವಾ ನಿಯಮಗಳಿಗೆ ವಿರುದ್ಧವಾದ ಕಾನೂನುಬಾಹಿರ ಚಟುವಟಿಕೆಯನ್ನು ಪರಿಶೀಲನೆ ನಡೆಸುತ್ತದೆ” ಎಂದು ಒಂದು ಸಂದೇಶವನ್ನು ಕಳಿಸುತ್ತದೆ.

ಈ ತಂಡವು ವಿಮರ್ಶೆಯನ್ನು ಸಲ್ಲಿಸಿದ ನಂತರ, ನಿಮ್ಮ ಖಾತೆಯನ್ನು ತಪ್ಪಾಗಿ ಬ್ಯಾನ್ ಮಾಡಲಾಗಿದೆ ಎಂದು ಮನಗಂಡರೆ ಪ್ಲಾಟ್‌ಫಾರ್ಮ್ ನಿಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸುವ ಸಾಧ್ಯತೆಗಳಿವೆ. ನಿಮ್ಮ ಖಾತೆಯು ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಾಟ್ಸಾಪ್ ಕಂಡುಕೊಂಡರೆ, ನಿಮ್ಮ ಹಳೆಯ ಖಾತೆಯನ್ನು ಮರುಬಳಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ನಿಮಗೆ ಮೂರನೇ ಅವಕಾಶವೂ ಸಿಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ವಾಟ್ಸಪ್ ನ ಸಪೋರ್ಟ್ ತಂಡದಿಂದ ಸಂದೇಶ ಬರುತ್ತದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..