1. Home
  2. Tech
  3. News
  4. ನಿಮ್ಮ ಮೊಬೈಲ್‌ನಲ್ಲಿ ಹೀಗಾಗುತ್ತಿದ್ದರೆ ಹ್ಯಾಕ್ ಆಗಿದೆ ಎಂದರ್ಥ..!! – ನಿಮ್ಮ ಮೊಬೈಲ್ ನಲ್ಲೂ ಹೀಗೆಲ್ಲ ಆಗುತ್ತಿದ್ಯಾ…!?

ನಿಮ್ಮ ಮೊಬೈಲ್‌ನಲ್ಲಿ ಹೀಗಾಗುತ್ತಿದ್ದರೆ ಹ್ಯಾಕ್ ಆಗಿದೆ ಎಂದರ್ಥ..!! – ನಿಮ್ಮ ಮೊಬೈಲ್ ನಲ್ಲೂ ಹೀಗೆಲ್ಲ ಆಗುತ್ತಿದ್ಯಾ…!?

ನಿಮ್ಮ ಮೊಬೈಲ್‌ನಲ್ಲಿ ಹೀಗಾಗುತ್ತಿದ್ದರೆ ಹ್ಯಾಕ್ ಆಗಿದೆ ಎಂದರ್ಥ..!! – ನಿಮ್ಮ ಮೊಬೈಲ್ ನಲ್ಲೂ ಹೀಗೆಲ್ಲ ಆಗುತ್ತಿದ್ಯಾ…!?
0

ನ್ಯೂಸ್ ಆ್ಯರೋ‌ : ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡದೆ ಇರುವವರನ್ನು ಹುಡುಕುವುದು ಕಷ್ಟ ಸಾಧ್ಯವಾಗಿದೆ. ಕಾರಣ ಇಂದು ಎಲ್ಲರ ಕೈನಲ್ಲಿಯೂ ಸ್ಮಾರ್ಟ್‌ಫೋನ್ ಅನ್ನು ಕಾಣಬಹುದಾಗಿದೆ. ಆದರೆ ಸ್ಮಾರ್ಟ್‌ಫೋನ್ ಬಳಕೆಯೂ ಸುರಕ್ಷಿತವಲ್ಲ ಎನ್ನಲಾಗಿದೆ. ನಿಮ್ಮ ಕೈನಲ್ಲಿರುವ ಸ್ಮಾರ್ಟ್‌ಫೋನ್ ನಿಮ್ಮ ಎಲ್ಲಾ ಮಾಹಿತಿಯನ್ನು ಲೀಕ್ ಮಾಡಲಿದೆ ಮತ್ತು ನಿಮ್ಮನ್ನು ಹ್ಯಾಕ್ ಮಾಡಲು ಸಹಾಯ ಮಾಡುತ್ತದೆ.

ನೀವು ಎಲ್ಲಿ ಇರುವಿರಿ ಎನ್ನುವುದರಿಂದ ಹಿಡಿದು, ನೀವು ಏನನ್ನು ಮಾಡುತ್ತಿದ್ದಿರಾ ಎನ್ನುವುದರವರೆಗೂ ಸ್ಮಾರ್ಟ್‌ಫೋನ್ ಮೂಲಕವೇ ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡಿದರೆ ಸಾಕು ನಿಮ್ಮನ್ನು ಹ್ಯಾಕ್ ಮಾಡಿದಂತೆಯೇ. ಈ ಹಿನ್ನೆಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?.

ನಿಮ್ಮ ಸ್ಮಾರ್ಟ್‌ಪೋನ್ ನಲ್ಲಿ ಮಾತನಾಡುವ ಮಧ್ಯದಲ್ಲಿ ಕಿರಿಕಿರಿ ಮತ್ತು ಏನಾದರೂ ಸೌಂಡ್‌ಗಳು ಪ್ರತಿ ಬಾರಿಯೂ ಬರುತ್ತದೆ ಎನ್ನುವುದಾದರೆ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆ ಎಂದು ಅರ್ಥ. ಕರೆ ಮಧ್ಯದ ಶಬ್ದವು ನಿಮ್ಮ ಫೋನ್ ಕದ್ದಾಲಿಕೆಯ ಸೂಚನೆಗಳಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ಮೇಲ್ ಬಾಕ್ಸಿಗೆ ಹೆಚ್ಚಿನ ಪ್ರಮಾಣದಲ್ಲಿ ಇಮೇಲ್ ಗಳು ಯಾರಿಂದ ಎಂದು ತಿಳಿಯದೆ ಇದ್ದರೂ ಬರುತ್ತಿದೆ ಎಂದರೆ ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಅರ್ಥ. ಅಲ್ಲದೇ ಈ ಮೇಲ್‌ಗಳು ನಿಮಗೆ ಹಾದಿ ತಪ್ಪಿಸುತ್ತವೆ.

ಇನ್ನೂ ನೀವು ಬಳಕೆ ಮಾಡಿಕೊಳ್ಳುತ್ತಿರುವ ಡೇಟಾ ಪ್ರಮಾಣವೂ ಒಮ್ಮೆಗೆ ಏರಿಕೆಯಾಗಿ ನೀವು ಬಳಕೆ ಮಾಡಿಲ್ಲವಾದರೂ ಡೇಟಾ ಖಾಲಿಯಾಗುತ್ತಿದೆ ಎಂದರೆ ನಿಮ್ಮ ಫೋನ್‌ ಅನ್ನು ಬೇರೆ ಯಾರೋ ಹ್ಯಾಕ್ ಮಾಡಿಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಹೆಚ್ಚಿನ ಡೇಟಾ ಬಳಕೆಯಾಗುತ್ತಿರುತ್ತದೆ.

ಇದಲ್ಲದೇ ನಿಮ್ಮ ಫೋನ್ ಅನ್ನು ಕಾಲ ಕಾಲಕ್ಕೆ ಆಪ್‌ಡೇಟ್ ಮಾಡಬೇಕು. ಆದರೆ ನಿಮ್ಮ ಫೋನ್ ಹ್ಯಾಕರ್ ಗಳ ನಿಯಂತ್ರಣದಲ್ಲಿ ಇತ್ತು ಎಂದರೆ ನೀವು ಅದನ್ನು ಆಪ್‌ಡೇಟ್ ಮಾಡಲು ಸಾಧ್ಯವಿಲ್ಲ. ನೀವು ಆಪ್‌ಡೇಟ್‌ಗೆ ಟ್ರೈ ಮಾಡಿದರು ಸಾಧ್ಯವಾಗುವುದಿಲ್ಲ. ಜೊತೆಗೆ ನೀವು ಬಳಕೆ ಮಾಡದೆ ಇದ್ದರೂ ಸಹ ನಿಮ್ಮ ಫೋನ್ ಬಿಸಿಯಾಗುತ್ತಿದೆ ಎಂದರೆ ನಿಮ್ಮನ್ನು ಹ್ಯಾಕ್ ಮಾಡಿದ್ದಾರೆ, ಮತ್ತು ನಿಮ್ಮ ಚಲನವಲನಗಳ ಮೇಲೆ ಕಣ್ಣು ಇಟ್ಟಿದ್ದಾರೆ ಎಂದು ತಿಳಿಯ ಬಹುದಾಗಿದೆ. ಫೋನ್ ಯೂಸ್ ಮಾಡದೆ ಬಿಸಿಯಾಗಿದೆ ಎಂದರೆ ಇದೇ ಕಾರಣಕ್ಕೆ ಎಂಬುದು ತಜ್ಞರ ಅಭಿಪ್ರಾಯ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..