1. Home
 2. Tech
 3. News
 4. ಆನ್‌ಲೈನ್‌ ಮೂಲಕ ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ..? ಇಲ್ಲಿದೆ ಸರಳ ವಿಧಾನ..

ಆನ್‌ಲೈನ್‌ ಮೂಲಕ ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ..? ಇಲ್ಲಿದೆ ಸರಳ ವಿಧಾನ..

ಆನ್‌ಲೈನ್‌ ಮೂಲಕ ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ..? ಇಲ್ಲಿದೆ ಸರಳ ವಿಧಾನ..
0

ನ್ಯೂಸ್ ಆ್ಯರೋ : ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಎಂಬುದು ಭಾರತದಲ್ಲಿ ಅತ್ಯಂತ ಪ್ರಮುಖವಾದ ನಾಗರಿಕರ ಗುರುತಿನ ಪತ್ರವಾಗಿದೆ. ಅಲ್ಲದೆ ತೆರಿಗೆ ಪಾವತಿಯ ಎಲ್ಲ ಮಾಹಿತಿಗಳನ್ನು ಒಳಗೊಂಡ ಅತಿ ಮುಖ್ಯ ದಾಖಲೆ ಇದಾಗಿದೆ. ಹೀಗಾಗಿ ಒಂದೊಮ್ಮೆ ಪ್ಯಾನ್ ಕಾರ್ಡಿನಲ್ಲಿ ಏನಾದರೂ ತಪ್ಪು ಮಾಹಿತಿಗಳು ನುಸುಳಿದ್ದಲ್ಲಿ ಅದರಿಂದ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳು ಸಹ ಉದ್ಭವವಾಗಬಹುದು. ಆದ್ದರಿಂದ ಪ್ಯಾನ್ ಕಾರ್ಡಿನಲ್ಲಿ ಏನಾದರೂ ಮಾಹಿತಿ ತಪ್ಪಾಗಿದ್ದರೆ ಅವನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಹಾಗಾದರೆ ಪ್ಯಾನ್ ಕಾರ್ಡಿನಲ್ಲಿನ ವಿವರಗಳನ್ನು ಬದಲಾವಣೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಆನ್ಲೈನ್ ಮೂಲಕ ಪ್ಯಾನ್ ಕಾರ್ಡ್ ಮಾಹಿತಿ ಅಪ್ಡೇಟ್ ಮಾಡುವ ವಿಧಾನ

 1. ಮೊದಲಿಗೆ ನಿಮ್ಮ ವೆಬ್ ಬ್ರೌಸರಿನಲ್ಲಿ https://www.tin-nsdl.com/ ವಿಳಾಸ ನಮೂದಿಸಿ ಕ್ಲಿಕ್ ಮಾಡಿ.
 2. Services ಮೆನುದಲ್ಲಿ ಕಾಣುವ “PAN” ಎಂಬುದನ್ನು ಕ್ಲಿಕ್ ಮಾಡಿ.
 3. Change/ Correction in PAN data ಎಂಬುದನ್ನು ಆಯ್ಕೆ ಮಾಡಿಕೊಂಡು ಅದರೊಳಗೆ ಕಾಣುವ Apply ಬಟನ್ ಕ್ಲಿಕ್ ಮಾಡಿ.
 4. ಈಗ ಡ್ರಾಪ್ ಡೌನ್ ಮೆನುವಿನಿಂದ Changes or Correction in existing PAN data/Reprint of PAN Card (No changes in Existing PAN Data) ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
 5. ಈಗ ನಿಮ್ಮ ಪ್ಯಾನ್ ಕಾರ್ಡಿನ ಕೆಟೆಗರಿ ಆಯ್ಕೆ ಮಾಡಿ.
 6. ಇಲ್ಲಿ ನಿಮ್ಮ ಎಲ್ಲ ವೈಯಕ್ತಿಕ ಮಾಹಿತಿಯನ್ನು ತುಂಬಿ.
 7. ಕ್ಯಾಪ್ಚಾ ಕೋಡ್ ನಮೂದಿಸಿ submit ಕ್ಲಿಕ್ ಮಾಡಿ.
 8. ಈಗ ನಿಮಗೆ ಇಮೇಲ್ ಒಂದು ಬರುತ್ತದೆ ಹಾಗೂ ಇದರಲ್ಲಿ ನೀಡಲಾದ ಬಟನ್ ಒಂದನ್ನು ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಮುಂದುವರಿಸಬೇಕಾಗುತ್ತದೆ.
 9. ಈ ಹಂತದಲ್ಲಿ ಬೇರೊಂದು ಪೇಜಿಗೆ ರಿಡೈರೆಕ್ಟ್ ಆದ ಮೇಲೆ Submit scanned images through e-Sign on NSDL e-gov ಎಂಬುದನ್ನು ಕ್ಲಿಕ್ ಮಾಡಿ.
 10. ಅಗತ್ಯವಾದ ವಿವರಗಳನ್ನೆಲ್ಲ ತುಂಬಿ Next ಕ್ಲಿಕ್ ಮಾಡಿ.
 11. ಈಗ ಇನ್ನೊಂದು ಪೇಜಿಗೆ ನೀವು ರಿಡೈರೆಕ್ಟ್ ಆಗುವಿರಿ. ಇಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಬಹುದು.
 12. ಈ ಪೇಜಿನಲ್ಲಿ ನಿಮ್ಮ ವಿಳಾಸದ ದಾಖಲೆ, ವಯಸ್ಸಿನ ದಾಖಲೆ, ಗುರುತಿನ ದಾಖಲೆ ಹಾಗೂ ಪ್ಯಾನ್ ಈ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿ.
 13. ಈಗ ತೆರೆದುಕೊಳ್ಳುವ ಡಿಕ್ಲೆರೇಶನ್ ಗೆ ಸಹಿ ಹಾಕಿ Submit ಕ್ಲಿಕ್ ಮಾಡಿ.
 14. ನಂತರ ಪೇಮೆಂಟ್ ಗೇಟ್ ವೇ ಗೆ ಪೇಜ್ ರಿಡೈರೆಕ್ಟ್ ಆಗುತ್ತದೆ ಹಾಗೂ ಇಲ್ಲಿ ಶುಲ್ಕ ಪಾವತಿಸಿದ ನಂತರ ಸ್ವೀಕೃತಿ ಪತ್ರ ಬರುತ್ತದೆ.
 15. ಸ್ವೀಕೃತಿ ಪತ್ರವನ್ನು ಭೌತಿಕವಾಗಿ ಪ್ರಿಂಟ್ ಹಾಕಿ ಇದರೊಂದಿಗೆ ಸಬ್ಮಿಟ್ ಮಾಡಲಾದ ಎಲ್ಲ ದಾಖಲೆಗಳನ್ನು ಲಗತ್ತಿಸಿ NSDL e-gov ಕಚೇರಿಗೆ ಕಳುಹಿಸಿ. ಇದರೊಂದಿಗೆ ಪಾಸ್ ಪೋರ್ಟ್ ಸೈಜಿನ ಭಾವಚಿತ್ರವೊಂದನ್ನು ಸ್ವೀಕೃತಿ ಪತ್ರದಲ್ಲಿ ತೋರಿಸಲಾದ ಜಾಗದಲ್ಲಿ ಅಂಟಿಸಿ, ಅದರ ಮೇಲೆ ಅಡ್ಡಲಾಗಿ ಸಹಿ ಮಾಡಿ ಕಳುಹಿಸುವುದನ್ನು ಮರೆಯಬೇಡಿ.
News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..