ನೋ ಪೇಮೆಂಟ್..! ಒಟಿಟಿ ಪ್ಲಾಟ್‌ಫಾರ್ಮ್ ಗೆ ಉಚಿತ ಚಂದಾದಾರಾಗಿ ಸಿನೆಮಾ, ಮನರಂಜನಾ ಕಾರ್ಯಕ್ರಮವನ್ನು ಆನಂದಿಸಿ – ಸಿಂಪಲ್ ಟಿಪ್ಸ್ ಇಲ್ಲಿದೆ..

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಆವರಿಸಿಕೊಂಡಿರುವ ಪ್ಲಾಟ್‌ಫಾರ್ಮ್ ಅಂದ್ರೆ ಅದು ಒಟಿಟಿ. ನೆಚ್ಚಿನ ಸಿನೆಮಾ, ಧಾರವಾಹಿ, ವೆಬ್ ಸಿರೀಸ್, ಎಂಟಟೈನ್‌ಮೆಂಟ್ ಪ್ರೋಗ್ರಾಂ ಹೀಗೆ ಹಲವು ಸೇವೆಗಳು ನಮಗೆ ಬೇಕಾದ ಸಂದರ್ಭದಲ್ಲಿ ಒಂದೇ ಕಡೆ ಸಿಗೋದು ಅಂದ್ರೆ ಅದು ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ.
ಅದೆಷ್ಟೋ ಜನ ಪ್ರತಿನಿತ್ಯ ಟಿವಿಯಲ್ಲಿ ಧಾರವಾಹಿಗಳನ್ನ ನೋಡ್ತಾರೆ. ಒಂದು ದಿನ ಮಿಸ್ ಆದ್ರೂ ಅದನ್ನ ಮತ್ತೆ ಒಟಿಟಿ ಮೂಲಕ ನೋಡಿ ಎಂಜಾಯ್ ಮಾಡ್ತಾರೆ. ಆದ್ರೆ ಈ ಒಟಿಟಿ ಪ್ಲಾಟ್ ಫಾರ್ಮ್ ಗಳನ್ನು ನಾವು ಬಳಸಬೇಕಾದ್ರೆ ಅದಕ್ಕೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಬೇಕು. ಒಟಿಟಿ ಪ್ಲಾಟ್‌ಫಾರ್ಮ್ಗಳಿಗೆ ಇಂಟರ್‌ನೆಟ್ ಹಾಕಿಸಿಕೊಂಡ್ರೆ ಯಾವುದೇ ಮಾಹಿತಿಯನ್ನ ನೀವು ಬೆರಳ ತುದಿಯಲ್ಲೆ ಪಡೆದುಕೊಳ್ಳಬಹುದು.
ಈ ಅಪ್ಲಿಕೇಶನ್‌ಗಳ ಶುಲ್ಕಗಳು ಕೂಡ ತುಂಬಾ ದುಬಾರಿಯಾಗಿರುತ್ತೆ. ಆದ್ರೆ ಕೆಲವೊಂದು ಒಟಿಟಿ ಫ್ಲಾಟ್ ಫಾರ್ಮ್ ಗಳಿಗೆ ನೀವು ಉಚಿತವಾಗಿ ಚಂದಾದಾರರಾಗಬಹುದು. ಅದು ಹೇಗೆ..? ಯಾವುದು ಅನ್ನೋದನ್ನ ವಿವರಿಸ್ತೀವಿ..
ಓಟಿಟಿ ‘ಓವರ್ ದಿ ಟಾಪ್’ ಕೇವಲ ಇಂಟರ್‌ನೆಟ್ ಮೂಲಕ ನಿಮಗೆ ಮನರಂಜನಾ ಹಾಗೂ ಮಾಹಿತಿಯನ್ನ ನೀಡುವ ಈ ಪ್ಲಾಟ್ ಫಾರ್ಮ್ ನಲ್ಲಿ ಬಹುಪಾಲು ಶುಲ್ಕ ಪಾವತಿ ಮಾಡಿಯೇ ಅದರಲ್ಲಿ ಸ್ಟ್ರೀಮ್ ಮಾಡಬೇಕಿದೆ. ಆದ್ರೆ ಅತೀ ಹೆಚ್ಚು ಚಾಲ್ತಿಯಲ್ಲಿರುವ ಹಾಗೂ ಜನರು ಬಳಕೆ ಮಾಡುವ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಂತಹ ಪ್ಲಾಟ್ ಫಾರ್ಮ್ ಗಳಿಗೆ ನೀವು ಉಚಿತ ಚಂದಾದಾರಿಕೆ ಪಡೆಯಬಹುದು.
ಹೌದು… ದೊಡ್ಡ ಟೆಲಿಕಾಂ ಕಂಪೆನಿಗಳಾದ ರಿಲಯನ್ಸ್ ಜಿಯೋ, ಏರ್ಟೆಲ್, ವೊಡಫೋನ್ ಐಡಿಯಾದ ಏರ್‌ಟೆಲ್‌ನ ಪೋಸ್ಟ್ ಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿದರೆ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಉಚಿತವಾಗಿ ಅನ್‌ಲಿಮಿಟೆಡ್ ಮನರಂಜನೆ ಪಡೆಯಬಹುದು.
ನೀವು 1000 ಅಥವಾ ಅದಕ್ಕಿಂತ ಕಡಿಮೆ ರಿಚಾರ್ಚ್ ಮಾಡಿಸಿಕೊಂಡರೂ ಈ ಪ್ರಯೋಜನವನ್ನ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಅನ್‌ಲಿಮಿಟೆಡ್ ಡೇಟಾ ಮತ್ತು ಧ್ವನಿ ಕರೆಗಳಂತಹ ಪ್ರಯೋಜನವನ್ನ ಕಂಪೆನಿಯು ಗ್ರಾಹಕರಿಗಾಗಿ ನೀಡಿದೆ.
ಜಿಯೋ ರಿಚಾಜ್೯ ಪ್ಲಾನ್ – ಉಚಿತ ಓಟಿಟಿ ಚಂದಾದಾರಿಕೆ ಹೇಗೆ..?
ಜಿಯೋ ಕಂಪೆನಿಯೂ 999 ರೂಪಾಯಿ ರೀಚಾರ್ಜ್ ಪ್ಲಾನ್ ಅನ್ನು ಗ್ರಾಹಕರ ಮುಂದಿಟ್ಟಿದೆ. ಈ ಯೋಜನೆಯಲ್ಲಿ ನೀವು ಯಾವುದೇ ನೆಟ್‌ವರ್ಕ್ ಗೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಮೆಸೇಜ್ ಮತ್ತು ಒಟ್ಟಾರೆ 200GB ಡಾಟಾ ಪಡೆಯಬಹುದು. ಈ ಯೋಜನೆಯಲ್ಲಿ 500GB ವರೆಗಿನ ಡೇಟಾ ರೋಲ್‌ಓವರ್ ಸಹ ಸಿಗಲಿದೆ.
ಜಿಯೋದ ಈ ಪ್ಲಾನ್ ಓಟಿಟಿಗೆ ಹೇಗೆ ಉಚಿತ ಅನ್ನೋದನ್ನ ನೋಡೋಣ. ಈ ಯೋಜನೆಯಲ್ಲಿ ನೀವು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಪಡೆಯಬಹುದು.
ಏರ್‌ಟೆಲ್ ರಿಚಾರ್ಜ್ ಪ್ಲಾನ್ – ಉಚಿತ ಓಟಿಟಿ ಚಂದಾದಾರಿಕೆ ಹೇಗೆ..?
ಏರ್‌ಟೆಲ್ ಕಂಪೆನಿಯೂ 999 ರೂಪಾಯಿಯ ಪೋಸ್ಟ್ ಪೇಯ್ಡ್ ಪ್ಲಾನ್ ನೀಡಿದೆ.. ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ ಬಳಕೆದಾರರಿಗೆ ಪ್ರತಿ ತಿಂಗಳು ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಮೆಸೇಜ್, 150GB ಡೇಟಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು 200GB ವರೆಗಿನ ರೋಲ್‌ಓವರ್ ಪ್ರಯೋಜನಗಳನ್ನು ಕೂಡ ನೀಡುತ್ತದೆ.
ಏರ್‌ಟೆಲ್‌ನ ಈ ರಿಚಾರ್ಜ್ ಪ್ಲಾನ್ ಮೂಲಕ 1 ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನ ಉಚಿತ ಚಂದಾದಾರಿಕೆ ಈ ಯೋಜನೆಯಲ್ಲಿ ಲಭ್ಯವಿದೆ.
ವೊಡಫೋನ್ ರಿಚಾರ್ಜ್ ಪ್ಲಾನ್ – ಉಚಿತ ಓಟಿಟಿ ಚಂದಾದಾರಿಕೆ ಹೇಗೆ..?
ವೊಡಫೋನ್ ಐಡಿಯಾ ಅಥವಾ vi ನಲ್ಲಿ 999 ರೂಪಾಯಿ ರಿಚಾರ್ಜ್ ಪ್ಲಾನ್ ಲಭ್ಯವಿದೆ.. ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಧ್ವನಿ ಕರೆ, ಪ್ರತಿ ತಿಂಗಳು 3 ಸಾವಿರ ಮೆಸೇಜ್ ಸೌಲಭ್ಯ ನೀಡಲಾಗಿದೆ. 220GB ಇಂಟರ್ನೆಟ್, ಪ್ರಾಥಮಿಕ ಸಂಪರ್ಕಕ್ಕಾಗಿ 140GB ಮತ್ತು ದ್ವಿತೀಯ ಸಂಪರ್ಕಕ್ಕಾಗಿ 40GB ಡೇಟಾ ಸಿಗಲಿದೆ. ಈ ಯೋಜನೆಯಲ್ಲಿ 200GB ವರೆಗೆ ಡೇಟಾ ರೋಲ್‌ಓವರ್ ಆಯ್ಕೆಯನ್ನು ಸಹ ನೀಡಲಾಗಿದೆ.
ವೊಡಫೋನ್‌ನ ಈ ರಿಚಾರ್ಚ್ ಪ್ಲಾನ್‌ನಿಂದ ನೀವು ಒಟಿಟಿ ಸ್ಟ್ರೀಮಿಂಗ್‌ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋಗೆ 1 ವರ್ಷದ ಚಂದಾದಾರಿಕೆ ಹಾಗೂ ಡಿಸ್ನಿ + ಹಾಟ್‌ಸ್ಟಾರ್ 1 ವರ್ಷದ ಚಂದಾದಾರಿಕೆ ಮತ್ತು Vi ಮೂವೀಸ್ ಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ.
ರಿಲಯನ್ಸ್ ಜಿಯೋ, ಏರ್ಟೆಲ್, ವೊಡಫೋನ್ ಐಡಿಯಾದ ಏರ್‌ಟೆಲ್ ನ ಪೋಸ್ಟ್ ಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿದರೆ ಓಟಿಟಿಯಲ್ಲಿ ಹೇಗೆ ಉಚಿತ ಚಂದಾದಾರಿಕೆ ಪಡೆದುಕೊಳ್ಳಬಹುದು ಅನ್ನೋದನ್ನ ನೋಡಿದ್ರಲ್ಲ. ಈ ಓಟಿಟಿ ಪ್ಲಾಟ್‌ಫಾರ್ಮ್ ಗಳು ಇತ್ತೀಚೆಗೆ ಬಹಳಷ್ಟು ವೇಗ ಪಡೆದುಕೊಂಡಿವೆ. ಈಗಾಗಲೇ ಭಾರತದಲ್ಲಿ ಮಿಲಿಯನ್‌ಗಟ್ಟಲೆ ಓಟಿಟಿ ಪ್ಲಾಟ್‌ಫಾರ್ಮ್ ಬಳಕೆದಾರರಿದ್ದಾರೆ. ಟೆಲಿಕಾಂ ಕಂಪೆನಿಗಳು ನೀಡುವ ರಿಚಾರ್ಜ್ ಪ್ಲಾನ್ ಮೂಲಕ ಓಟಿಟಿಯಲ್ಲಿ ಉಚಿತ ಚಂದಾದಾರಿಕೆ ಪಡೆದುಕೊಂಡು, ಮನರಂಜನಾ ಕಾರ್ಯಕ್ರಮಗಳನ್ನ ಆನಂದಿಸಿ.