ಇನ್‌ಸ್ಟಾಗ್ರಾಂನಲ್ಲಿ ಹೊಸ ಫೀಚರ್ ಬಿಡುಗಡೆ – ಮೆಸೇಜ್ ಮಾಡದೇ ಮನದ ಮಾತು ಹೇಳ್ಬೋದು, ರೀಲ್ಸ್ ಸಮಯವೂ ಹೆಚ್ಚಳ..!!

ನ್ಯೂಸ್ ಆ್ಯರೋ : ತಮ್ಮ ಬಳಕೆದಾರರಿಗೆ ಇನ್ನಷ್ಟು ಉಪಯೋಗವಾಗಲೆಂದು ಇನ್‌ಸ್ಟಾಗ್ರಾಂನಲ್ಲಿ ಬಹಳಷ್ಟು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇದೀಗ ನೋಟ್ ಎಂಬ ಫೀಚರ್ ಬಿಡುಗಡೆಯಾಗಿದೆ. ಈ ಫೀಚರ್ಸ್‌ನಲ್ಲಿ ನಿಮ್ಮ ಅನಿಸಿಕೆಯನ್ನು ಒಂದೇ ವಾಕ್ಯದಲ್ಲಿ ಬರೆದು ಶೇರ್ ಮಾಡಬಹುದು. 24 ಗಂಟೆಯವರೆಗೆ ಇದು ಕಾಣಿಸುತ್ತದೆ. ಇಲ್ಲಿದೆ ಈ ಫೀಚರ್ಸ್‌ನ ಮಾಹಿತಿ.
ನಿಮ್ಮ ಅನಿಸಿಕೆ ತಿಳಿಸುವ ಫೀಚರ್ಸ್
ಇನ್ಸ್ಟಾಗ್ರಾಂನ ಈ ಫೀಚರ್ ಒಂದು ನೋಟ್ ತರಹದ್ದಾಗಿದೆ. ಇದರಲ್ಲಿ ಬಳಕೆದಾರರು ತಮ್ಮ ಅನಿಸಿಕೆಗಳನ್ನು ಬರೆದು ಶೇರ್ ಮಾಡಬಹುದು. ಒಮ್ಮೆ ಹಾಕಿದ ನೋಟ್ 24 ಗಂಟೆಯೂ ಇರುತ್ತದೆ. ಇದು ಇನ್ಸ್ಟಾಗ್ರಾಂ ಪರಿಚಯಿಸಿದಂತಹ ಹೊಸ ಫೀಚರ್ಸ್ ಆಗಿದೆ.
ಸ್ಟೇಟಸ್ನಂತೆಯೇ ಕಾರ್ಯನಿರ್ವಹಿಸುತ್ತದೆ
ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆಯಾದಂತಹ ಈ ನೋಟ್ ಫೀಚರ್ ವಾಟ್ಸಪ್ ಸ್ಟೇಟಸ್ನಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ಇದರಲ್ಲಿ ಫೋಟೋ ಅಥವಾ ವಿಡಿಯೋ ಹಾಕಲಾಗುವುದಿಲ್ಲ. ಬರವಣಿಗೆ ಮೂಲಕ ಮಾತ್ರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಬೇಕಾದರೆ ಆಗಾಗ ಬದಲಾಯಿಸಬಹುದು.
ಇನ್ಮುಂದೆ ಮೆಸೇಜ್ ಮಾಡಬೇಕಾಗಿಲ್ಲ
ಈ ಹಿಂದೆ ಬೆಳಗ್ಗೆ ಎದ್ದಾಗ, ರಾತ್ರಿ ಮಲಗುವಾಗ ಶುಭೋದಯ, ಶುಭರಾತ್ರಿ ಹೇಳುವವರಿಗೆ ಈ ಫೀಚರ್ಸ್ ತುಂಬಾನೇ ಸಹಕಾರಿ. ಈ ಫೀಚರ್ಸ್‌ನ ಮುಖಾಂತರ ಒಮ್ಮೆಲೆ ಸಂದೇಶವನ್ನು ಹಾಕಿ ಬಿಟ್ಟರೆ ಎಲ್ಲರಿಗೂ ಸಂದೇಶ ತಲುಪುತ್ತದೆ.
ಇನ್ಸ್ಟಾಗ್ರಾಂನ ಇತರ ಅಪ್‌ಡೇಟ್ಸ್:
ಸ್ನ್ಯಾಪ್ಚಾಟ್ನಲ್ಲಿದ್ದ ಅವತಾರ್ ಫೀಚರ್ಸ್ ಈ ಬಾರಿ ಇನ್‌ಸ್ಟಾಗ್ರಾಂನಲ್ಲಿ ಲಭ್ಯವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಮೊದಲಿಗೆ ಯಾವುದೇ ಮೆಸೇಜ್ಗೆ ಅಥವಾ ಸ್ಟೋರಿಗಳಿಗೆ ರಿಪ್ಲೈ ಮಾಡಬೇಕಾದರೆ ಎಮೋಜಿ ಗಳ ಮೂಲಕ ಮಾಡುತ್ತಿದ್ದರು. ಇನ್ನು ಬೇಕಾದ ಹಾಗೆ ಅವತಾರ್ ಸ್ಟಿಕ್ಕರ್ಸ್ಗಳನ್ನು ರಚಿಸಬಹುದಾಗಿದೆ. ಇದನ್ನು ನಾವು ಸೆಟ್ಟಿಂಗ್ಸ್ನಲ್ಲಿ ಅವತಾರ್ ಎಂಬ ಆಯ್ಕೆ ಸಿಗುತ್ತದೆ. ಅದಕ್ಕೆ ಟ್ಯಾಪ್ ಮಾಡುವ ಮೂಲಕ ಅವತಾರ್ ಸ್ಟಿಕ್ಕರ್ಸ್ ಅನ್ನು ರಚಿಸಬಹುದು.
ರೀಲ್ಸ್ನ ಅವಧಿ ಏರಿಕೆ
ರೀಲ್ಸ್ಗಳನ್ನು ಫೋಸ್ಟ್ ಮಾಡುವಾಗ ಕೇವಲ 30 ಸೆಕೆಂಡು ಮತ್ತು 60 ಸೆಕೆಂಡುಗಳ ರೀಲ್ಸ್ಗಳನ್ನು ಮಾತ್ರ ಪೋಸ್ಟ್ ಮಾಡಬಹುದಿತ್ತು. ಆದರೆ ಈ ಬಾರಿ ಈ ಅವಧಿಯನ್ನು 90 ಸೆಕೆಂಡುಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದ ಮತ್ತಷ್ಟು ಅವಕಾಶಗಳು ದೊರೆಯಲಿದೆ.