ಹೊಸವರ್ಷಕ್ಕೆ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕ್ಯೂ 11 ಸ್ಮಾರ್ಟ್ ಫೋನ್ – ಇದರ ಫೀಚರ್ಸ್ ಹೇಗಿದೆ ಗೊತ್ತಾ…!?

ನ್ಯೂಸ್ ಆ್ಯರೋ : ದೇಶೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಮತ್ತೊಂದು ನೂತನ ಸ್ಮಾರ್ಟ್ ಫೋನ್ ಲಗ್ಗೆ ಇಡಲಿದ್ದು, ಅಗಾಧ ಗ್ರಾಹಕ ವಲಯವನ್ನು ಸೃಷ್ಚಿಸಿಕೊಂಡಿರುವ ಐಕ್ಯೂ ಕಂಪನಿ ತನ್ನ ಹೊಸ ಐಕ್ಯೂ 11 ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ. 2023ರ ಜನವರಿ 10 ರಂದು ಐಕ್ಯೂ 11 ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ ಎಂದು ಐಕ್ಯೂ ಕಂಪನಿಯು ತನ್ನ ಅಧಿಕೃತ ಲಿಂಕ್ ಕಮ್ಯುನಿಟಿ ಸೈಟ್ ಮೂಲಕ ತಿಳಿಸಿದೆ.

ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, ಅಲ್ಲಿ ಲಾಂಚ್ ಆದ ಕೆಲವೇ ಗಂಟೆಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕವನ್ನು ಕಂಪನಿಯು ಪ್ರಕಟಿಸಿ, ಖಚಿತಪಡಿಸಿದೆ. ಹಾಗಾಗಿ, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರು ಜನವರಿ 10ರಂದು ಐಕ್ಯೂ ಕಂಪನಿಯ ಐಕ್ಯೂ 11 ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಾಗಲಿದೆ.
ಸದ್ಯದ ಮಾಹಿತಿ ಪ್ರಕಾರ ಕಂಪನಿಯು ಐಕ್ಯೂ 11 ಸ್ಮಾರ್ಟ್‌ಫೋನ್ ಮಾತ್ರ ಬಿಡುಗಡೆಯಾಗುತ್ತಿದ್ದು, ಐಕ್ಯೂ 11 ಪ್ರೋ ಸ್ಮಾರ್ಟ್ ಫೋನ್ ಲಾಂಚ್ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಎರಡು ಫೋನ್ ಗಳು ಬಹುತೇಕ ಸಾಮ್ಯತೆಯನ್ನು ಹೊಂದಿದ್ದು, ಕ್ಯಾಮೆರಾಗಳು ಮತ್ತು ಬ್ಯಾಟರಿ ಬಾಳಿಕೆ/ ಚಾರ್ಜಿಂಗ್ ಸಮಯವನ್ನು ಹೊರತುಪಡಿಸಿ ಐಕ್ಯೂ11 ಮತ್ತು ಐಕ್ಯೂ11 Pro ನಡುವೆ ಅಂತಹ ವ್ಯತ್ಯಾಸಗಳೇನೂ ಇಲ್ಲ.
ಐಕ್ಯೂ 11 ಸ್ಮಾರ್ಟ್ ಫೋನಿನ ಡಿಸ್‌ಪ್ಲೇ ಸಾಕಷ್ಟು ಪ್ರಮಾಣಿತ 2.5D ಆಗಿದ್ದರೆ, iQOO 11 Pro ಹೆಚ್ಚುವರಿಯಾಗಿ ಬಾಗಿದ ಸ್ಕ್ರೀನ್ ಅನ್ನು ಹೊಂದಿದೆ ಎಂದು ಹೇಳಬಹುದು. ಇದು 6.78-ಇಂಚಿನ AMOLED ಡಿಸ್‌ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್ ಮತ್ತು HDR 10+ ಪ್ಲೇಬ್ಯಾಕ್ ಸಾಮರ್ಥ್ಯಗಳನ್ನು ಹೊಂದಿದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ ಸಿಪಿಯು ಅನ್ನು 16 GB RAM ಮತ್ತು 512 GB ವರೆಗಿನ UFS4.0 ಸ್ಟೋರೇಜ್‌ನೊಂದಿಗೆ ಸಂಯೋಜಿಸಲಾಗಿದೆ.
ಐಕ್ಯೂ 11 ಸ್ಮಾರ್ಟ್‌ಫೋನ್ 5,000 mAh ಬ್ಯಾಟರಿ ಮತ್ತು 120W ಕ್ಷಿಪ್ರ ವೈರ್ಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದ್ದರೆ, iQOO 11 Pro ಸ್ಮಾರ್ಟ್ ಫೋನ್ 4,700 mAh ಬ್ಯಾಟರಿಯನ್ನು ಹೊಂದಿದೆ ಮತ್ತು 200W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ 50 MP ಪ್ರಾಥಮಿಕ ಕ್ಯಾಮೆರಾ ಹೊಂದಿದ್ದರೆ, 13 MP ಭಾವಚಿತ್ರ ಮತ್ತು 8 MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಕಾಣಹುದು. iQOO 11 Pro ಮೂರು ಕ್ಯಾಮೆರಾಗಳನ್ನು ಹೊಂದಿದೆ. 50 MP ಪ್ರಾಥಮಿಕ ಸೋನಿ ಕ್ಯಾಮೆರಾ ಮತ್ತು 50 MP ಅಲ್ಟ್ರಾವೈಡ್ ಮತ್ತು 13 MP ಪೋಟ್ರೆಯಟ್ ಕ್ಯಾಮೆರಾಗಳಿವೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಕೂಡ ಇದೆ.
ಭಾರತದಲ್ಲಿ ಐಕ್ಯೂ 11 ಮಾರಾಟ ಜ.13 ರಿಂದ ಆರಂಭವಾಗಲಿದ್ದು, ಬಜೆಟ್ ಫೋನ್‌ಗಳನ್ನು ಬಿಡುಗಡೆಗೊಳಿಸುವ ಐಕ್ಯೂ ಕಂಪನಿಯ ಫೋನ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದ್ದು, ಬಳಕೆದಾರರಲ್ಲಿ ಆ ಬಗ್ಗೆ ಕುತೂಹಲ ಮೂಡಿದೆ.