1. Home
  2. Tech
  3. News
  4. ಗೂಗಲ್ ನಲ್ಲಿ ಹೀಗೆಲ್ಲ ಸರ್ಚ್ ಮಾಡೋದ್ರಿಂದ ನೀವು ಜೈಲಿಗೂ‌ ಹೋಗಬಹುದು – ಇಂತಹ ವಿಷಯ ಶೇರ್ ಮಾಡೋದು ತಪ್ಪು : ನಿಮಗೆ ಇದೆಲ್ಲ‌ ತಿಳಿದಿರಲಿ..

ಗೂಗಲ್ ನಲ್ಲಿ ಹೀಗೆಲ್ಲ ಸರ್ಚ್ ಮಾಡೋದ್ರಿಂದ ನೀವು ಜೈಲಿಗೂ‌ ಹೋಗಬಹುದು – ಇಂತಹ ವಿಷಯ ಶೇರ್ ಮಾಡೋದು ತಪ್ಪು : ನಿಮಗೆ ಇದೆಲ್ಲ‌ ತಿಳಿದಿರಲಿ..

ಗೂಗಲ್ ನಲ್ಲಿ ಹೀಗೆಲ್ಲ ಸರ್ಚ್ ಮಾಡೋದ್ರಿಂದ ನೀವು ಜೈಲಿಗೂ‌ ಹೋಗಬಹುದು – ಇಂತಹ ವಿಷಯ ಶೇರ್ ಮಾಡೋದು ತಪ್ಪು : ನಿಮಗೆ ಇದೆಲ್ಲ‌ ತಿಳಿದಿರಲಿ..
0

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಾಹಿತಿಗಾಗಿ ಎಲ್ಲರೂ ಗೂಗಲ್ ನಲ್ಲಿ ತಡಕಾಡೋದು‌ ಸರ್ವೇಸಾಮಾನ್ಯ. ‌ ತಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯನ್ನು ಹಾಕುವ ಮೂಲಕ ಉತ್ತರವನ್ನು ಕಂಡುಕೊಳ್ಳುತ್ತಾರೆ. ಆದರೆ ಗೂಗಲ್ ನಲ್ಲಿ ಹುಡುಕುವ ಮೂಲಕ ನಿಮ್ಮನ್ನು ಜೈಲಿಗೆ ಕಳುಹಿಸುವ ಕೆಲವು ವಿಷಯಗಳಿವೆ ಎಂಬುದು‌ ನಿಮಗೆ‌ ಗೊತ್ತಾ..!? ಇಲ್ಲಿವೆ ನೋಡಿ ಅಚ್ಚರಿಯ ಸತ್ಯಗಳು…

ಬಾಂಬ್ ತಯಾರಿಸುವುದು ಹೇಗೆ?

ತಪ್ಪಾಗಿ ಅಥವಾ ತಮಾಷೆಯಾಗಿ ಗೂಗಲ್ ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ನೋಡಲು ನೀವು ಪ್ರಯತ್ನಿಸಿದರೆ, ನೀವು ಜೈಲಿಗೆ ಹೋಗಬೇಕಾಗಬಹುದು. ಯಾಕೆಂದರೆ ಬಾಂಬ್ ಕುರಿತಾಗಿ ಸರ್ಚ್ ಮಾಡೋದು ನಿಮ್ಮ ಸರ್ಚ್ ಹಿಸ್ಟರಿ ಪೋಲೀಸರೂ ಕಣ್ಣು ಹಾಯಿಸಬಹುದು.

ಅತ್ಯಾಚಾರ ಸಂತ್ರಸ್ತರ ಹೆಸರು

ನೀವು ಅತ್ಯಾಚಾರ ಸಂತ್ರಸ್ತರ ಹೆಸರು ವಿವರಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದರೆ, ಇದು ತುಂಬಾ ಸೂಕ್ಷ್ಮ ವಿಷಯವಾಗಿದ್ದು, ಇಂತಹ ತಪ್ಪು ಮಾಡಿದ್ದಕ್ಕಾಗಿ ನಿಮ್ಮನ್ನು ಜೈಲಿಗೆ ಹಾಕಬಹುದು. ಪೊಕ್ಸೊ ಪ್ರಕರಣಗಳಲ್ಲಿ ಸಂತ್ರಸ್ತರ ಹೆಸರು, ಫೋಟೋ ಶೇರ್ ಮಾಡೋದು ಗಂಭೀರ ಅಪರಾಧವಾಗಿದೆ.

ಚೈಲ್ಡ್ ಪೋರ್ನ್

ಚೈಲ್ಡ್ ಪೋರ್ನ್ ಬಹಳ ಸೂಕ್ಷ್ಮ ವಿಷಯವಾಗಿದೆ ಮತ್ತು ಅದನ್ನು ಗೂಗಲ್ ನಲ್ಲಿ ಹುಡುಕುವುದು ತುಂಬಾ ಅಪಾಯಕಾರಿಯಾಗಿದೆ. ನೀವು ಇದನ್ನು ಮಾಡಿದರೆ, ನೀವು ಪೋಸ್ಕೋ ಕಾಯ್ದೆ 2012 ರ ಸೆಕ್ಷನ್ 14 ರ ಅಡಿಯಲ್ಲಿ ಜೈಲಿಗೆ ಹೋಗಬೇಕಾಗಬಹುದು. ಇದಕ್ಕಾಗಿ 5 ರಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಚೈಲ್ಡ್‌ ಪೋರ್ನ್ ವೆಬ್ ಸೈಟ್ ಗೆ ನೀವು ಲಾಗಿನ್ ಆಗೋದು, ಚೈಲ್ಡ್ ಪೋರ್ನ್ ಶೇರ್ ಮಾಡೋದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ.