ಟಿ20 ವಿಶ್ವಕಪ್ ಆರಂಭವಾಗುತ್ತಲೇ ಗ್ರಾಹಕರಿಗೆ ಶಾಕ್ ನೀಡಿದ ಜಿಯೋ – ಟೆಲಿಕಾಂ ದೈತ್ಯ ಕಂಪನಿ ಮಾಡಿದ್ದೇನು ನೋಡಿ…

ನ್ಯೂಸ್ ಆ್ಯರೋ : ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ನಂತಹ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಈಗೀಗ ಹೆಚ್ಚಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುವ ಯೋಜನೆಯನ್ನು ಪರಿಚಯಿಸುತ್ತಿದೆ. ಅಲ್ಲದೇ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದನ್ನೇ ಗಮನದಲ್ಲಿಟ್ಟುಕೊಂಡು ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿತ್ತು. ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿರುವ ಎಲ್ಲಾ ವಿಷಯಗಳನ್ನು ನೋಡುವ ಅವಕಾಶವನ್ನು ಈ ಪ್ಲಾನ್‌ಗಳು ಒಳಗೊಂಡಿದ್ದವು, ಇದರಿಂದ ಜಿಯೋ ಗ್ರಾಹಕರಿಗೆ ಲಾಭವಾಗಿತ್ತು.
ಆದರೆ ಟಿ20 ವಿಶ್ವಕಪ್ ಶುರುವಾಗುತ್ತಿದ್ದಂತೆ ಜಿಯೋ ತನ್ನ ಎಲ್ಲಾ ಪ್ರಿಪೇಯ್ಡ್ ಯೋಜನೆಗಳಿಂದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಪ್ರಯೋಜನವನ್ನು ರದ್ದು ಮಾಡಿದ್ದು, ಹಿಂಪಡೆಕೊಂಡ ಆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ಲಾನ್‌ಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಜಿಯೋ ಟೆಲಿಕಾಂ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಬೆನಿಫಿಟ್ಸ್ ಇದ್ದ 12 ಪ್ರೀಪೇಯ್ಡ್ ಯೋಜನೆಗಳನ್ನು ಕ್ಯಾನ್ಸಲ್ ಮಾಡಿದ್ದು, ಸದ್ಯ ಜಿಯೋ ಎರಡು ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ಮಾತ್ರ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡುತ್ತಿದೆ.
ಜಿಯೋ ಡಿಸ್ನಿ+ ಹಾಟ್‌ಸ್ಟಾರ್ ಡೇಟಾ ಆಡ್-ಆನ್ ರೀಚಾರ್ಜ್ ಯೋಜನೆಯ ಸೌಲಭ್ಯವಿದ್ದ 151ರೂ., 333ರೂ. 499ರೂ. 555ರೂ. , 583ರೂ., 601ರೂ., 659ರೂ., 783ರೂ., 799ರೂ., 1,066ರೂ., 2,999ರೂ. , 3119ರೂ. ಪ್ಲಾನ್ ಗಳನ್ನು ನಿಲ್ಲಿಸಿದೆ.
ಸದ್ಯ ಜಿಯೋ 4,199 ರೂ ಬೆಲೆಯ ಪ್ರಿಪೇಯ್ಡ್ ಯೋಜನೆಯಲ್ಲಿ Disney+ Hotstar ಚಂದಾದಾರಿಕೆ ನೀಡಿದ್ದು, 365 ದಿನಗಳ ಮಾನ್ಯತೆಯ ಅವಧಿಗೆ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 168 GB ಡೇಟಾ ಸೌಲಭ್ಯ ಸಿಗಲಿದ್ದು, ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ100 SMSಗಳ ಜೊತೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯವಿದೆ.
ಇದರೊಂದಿಗೆ 1499 ಮೌಲ್ಯದ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡಿದ್ದು, 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 168 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯವಿದೆ.