1. Home
  2. Tech
  3. News
  4. ಮಾರುಕಟ್ಟೆಗೆ 20 ಸಾವಿರಕ್ಕೂ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಪರಿಚಯ‌ – ದೇಶದಲ್ಲಿ‌ ಮತ್ತೆ ಜಿಯೋ ಮೋಡಿ

ಮಾರುಕಟ್ಟೆಗೆ 20 ಸಾವಿರಕ್ಕೂ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಪರಿಚಯ‌ – ದೇಶದಲ್ಲಿ‌ ಮತ್ತೆ ಜಿಯೋ ಮೋಡಿ

ಮಾರುಕಟ್ಟೆಗೆ 20 ಸಾವಿರಕ್ಕೂ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಪರಿಚಯ‌ – ದೇಶದಲ್ಲಿ‌ ಮತ್ತೆ ಜಿಯೋ ಮೋಡಿ
0

ನ್ಯೂಸ್ ಆ್ಯರೋ : ಕಡಿಮೆ ಬೆಲೆಯಲ್ಲಿ ಡೇಟಾ, 4ಜಿ ಫೀಚರ್ ಫೋನ್ ಬಿಡುಗಡೆ ಮಾಡಿದ್ದ ಭಾರತೀಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ರಿಲಯನ್ಸ್ ಮಾಲೀಕತ್ವದ ಜಿಯೋ ಈಗ ಕಡಿಮೆ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಲ್ಯಾಪ್ಟಾಪ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಜಿಯೋಬುಕ್‌ ಲ್ಯಾಪ್‌ಟಾಪ್‌ (Jio Book Laptop) ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ತಂತ್ರಜ್ಞಾನ ನೀಡಲಿದೆ ಎಂದು ಹೇಳಲಾಗುತ್ತಿದೆ. ಕಡಿಮೆ ಬಜೆಟ್ ಲ್ಯಾಪ್‌ಟಾಪ್ ಮತ್ತು ವಿಶೇಷವಾಗಿ 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಇದನ್ನು ಖರೀದಿಸಬಹುದಾಗಿದೆ.

ಜಿಯೋಬುಕ್‌ ಪ್ಲಾಸ್ಟಿಕ್ ಬಾಡಿಯನ್ನು ಹೊಂದಿದ್ದು, ಹಿಂಬದಿಯ Jio ಬ್ರ್ಯಾಂಡಿಂಗ್ ಜೊತೆಗೆ ಕೀಬೋರ್ಡ್‌ನಲ್ಲಿ ವಿಂಡೋಸ್ ಕೀಯನ್ನು ಹೊಂದಿದೆ. ಲ್ಯಾಪ್‌ಟಾಪ್‌ನಲ್ಲಿ ಅಂತರ್ಗತ 4G LTE ಬೆಂಬಲವು ಅನೇಕ ಜನರ ಮುಖ್ಯ ಆಕರ್ಷಣೆಯಾಗಿದೆ. ಇದು 1366×768 ರೆಸಲ್ಯೂಶನ್‌ನೊಂದಿಗೆ 11.6 ಇಂಚಿನ TN ಡಿಸ್‌ಪ್ಲೇಯನ್ನು ಫಲಕ ಹೊಂದಿದೆ.

ಲ್ಯಾಪ್‌ಟಾಪ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು ಅದು ಅಡ್ರಿನೊ 610 ಜಿಪಿ ಸೆಟ್ ನೊಂದಿಗೆ ಬರುತ್ತದೆ. ಇದು 2GB LPDDR4X RAM, 32GB ಮೆಮೊರಿಯನ್ನು ಹೊಂದಿದೆ. ಇದರ ಆಪರೇಟಿಂಗ್ ಸಿಸ್ಟಮ್ ಅನ್ನು JioOS ಎಂದು ಹೆಸರಿಸಲಾಗಿದೆ ಮಾಡಲಾಗಿದೆ.

ಜಾಗತಿಕ ಕಂಪನಿಗಳಾದ ಕ್ವಾಲ್ಕಮ್ (Qualcomm) ಹಾಗೂ ಮೈಕ್ರೋಸಾಫ್ಟ್ (Microsoft) ಜತೆಗೆ ಕೈಜೋಡಿಸಿರುವ ಜಿಯೋ 4ಜಿ ಸಿಮ್‌ಕಾರ್ಡ್‌ (4G SIM card) ಇರುವ ಜಿಯೋಬುಕ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

2018ರಲ್ಲಿಯೇ ಜಿಯೋ ಬುಕ್ ಹೆಸರಿನ ಲಾಪ್ ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಅದರಂತೆ, ಇದೀಗ ಜಿಯೋ ಲ್ಯಾಪ್‌ಟಾಪ್‌ಗಳ ಬಿಡುಗಡೆಗೆ ರಿಲಯನ್ಸ್ ಜಿಯೋ ಕಂಪನಿ ಸಿದ್ಧವಾಗಿದೆ ಎಂದು ಹೇಳಲಾಗಿದೆ.

ಅಕ್ಟೋಬರ್‌ನಿಂದ ಶಾಲೆಗಳು, ಸರ್ಕಾರಿ ಸಂಸ್ಥೆಗಳಿಗೆ ಈ ಲ್ಯಾಪ್‌ಟಾಪ್‌ ಒದಗಿಸುವ ಯೋಜನೆಯಿದ್ದು, ಮುಂದಿನ 3 ತಿಂಗಳಲ್ಲಿ ಇದು ಎಲ್ಲ ಗ್ರಾಹಕರಿಗೂ ಲಭ್ಯವಾಗಲಿದೆ. ಈಗಾಗಲೇ 5ಜಿ ಸೇವೆ ನೀಡುವ ಕಾರ್ಯದಲ್ಲಿ ಚುರುಕಿನ ಕೆಲಸಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಆಯ್ದ ಕೆಲವೆಡೆ ಜಿಯೋ 5ಜಿ ಲಭ್ಯವಾಗಲಿದೆ. ಭಾರತದ ಟೆಲಿಕಾಂ ಲೋಕದಲ್ಲಿ ದಿಗ್ಗಜನಾಗಿ ಬೆಳೆದು ನಿಂತಿರುವ ರಿಲಯನ್ಸ್ ಜಿಯೋ ಇದೀಗ ಲ್ಯಾಪ್‌ಟಾಪ್ ಕ್ಷೇತ್ರದಲ್ಲಿಯೂ ಮೋಡಿ ಮಾಡಲು ಬರುತ್ತಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..