1. Home
  2. Tech
  3. News
  4. ನಿಮ್ಮ ಸ್ಮಾರ್ಟ್‌ಫೋನ್‌ ಆಗಾಗ ಕೈಕೊಡುತ್ತಿದೆಯೇ? – ಮೊಬೈಲ್ ನ ಎಲ್ಲಾ ತೊಂದರೆಗಳ ಪರಿಹಾರಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್..

ನಿಮ್ಮ ಸ್ಮಾರ್ಟ್‌ಫೋನ್‌ ಆಗಾಗ ಕೈಕೊಡುತ್ತಿದೆಯೇ? – ಮೊಬೈಲ್ ನ ಎಲ್ಲಾ ತೊಂದರೆಗಳ ಪರಿಹಾರಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್..

ನಿಮ್ಮ ಸ್ಮಾರ್ಟ್‌ಫೋನ್‌ ಆಗಾಗ ಕೈಕೊಡುತ್ತಿದೆಯೇ? – ಮೊಬೈಲ್ ನ ಎಲ್ಲಾ ತೊಂದರೆಗಳ ಪರಿಹಾರಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್..
0

ನ್ಯೂಸ್ ಆ್ಯರೋ : ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಇಲ್ಲದ ವ್ಯಕ್ತಿಯಿಲ್ಲ. ನಮ್ಮ ಜೀವನ ಶೈಲಿ ಸ್ಮಾರ್ಟ್‌ಫೋನ್‌ ಗೆ ಒಗ್ಗಿಕೊಂಡಿದ್ದು, ಅದರಿಂದ ಅನೇಕ ಪ್ರಯೋಜನಗಳನ್ನು ನಾವು ಪಡೆಯುತ್ತೇವೆ. ಸ್ಮಾರ್ಟ್‌ಫೋನ್‌ಗಳಲ್ಲಿ ಎಷ್ಟೆಲ್ಲಾ ಸೇವೆ ಪಡೆಯಬಹುದೋ ಹಾಗೆಯೇ ಸಮಯ ಹೋದ ಹಾಗೇ ಒಂದೊಂದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಅದನ್ನು ‌ನಾವೇ ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಅದಕ್ಕೆ ಈ ಲೇಖನ ಓದಿರಿ.

ನಿಧಾನ ಚಾರ್ಜಿಂಗ್ ಸಮಸ್ಯೆಗೆ ಇಲ್ಲಿದೆ ಸುಲಭ ಉಪಾಯ

ಮೊಬೈಲ್ ತೆಗೆದುಕೊಂಡು ಒಂದು ವರ್ಷ ಆಗುವಷ್ಟರಲ್ಲಿ ಮೊದಲು ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ನಿಧಾನ ಚಾರ್ಜಿಂಗ್. ಮೊದಲು ಗಮನಿಸಬೇಕಾದುದು ಕೇಬಲ್‌ ಹಾಗೂ ಚಾರ್ಜಿಂಗ್ ಕೇಸ್. ಕೆಲವು ಸಲ ಚಾರ್ಜಿಂಗ್‌ ಕೇಸ್‌ ಅಗತ್ಯವಾದ ಪವರ್‌ ಅನ್ನು ಮೊಬೈಲ್‌ಗೆ ಒದಗಿಸಲು ವಿಫಲವಾಗುತ್ತದೆ. ಇದರಲ್ಲಿ ದೋಷಪೂರಿತ ಕೇಬಲ್ ಸಹ ಒಂದು. ಹಾಗಾಗಿ ನೀವು ಸ್ಮಾರ್ಟ್‌ಫೋನ್‌ಗೆ ಹೊಂದಿಕೆಯಾಗುವ ಕೇಬಲ್‌ ಅಥವಾ ಚಾರ್ಜಿಂಗ್‌ ಕೇಸ್‌ನ್ನು ಆಯ್ಕೆ ಮಾಡುವುದು ಒಳಿತು. ಪ್ರಾರಂಭದಲ್ಲೇ ಈ ಸಮಸ್ಯೆಯನ್ನು ಕಂಡುಹಿಡಿದರೆ ಸುಮ್ಮನೇ ಹಣ ವ್ಯಯ ಮಾಡುವುದು ತಪ್ಪುತ್ತದೆ.

ಬ್ಯಾಗ್ರೌಂಡ್ ಅಪ್ಲಿಕೇಶನ್‌

ನಿಮ್ಮ ಮೊಬೈಲ್‌ನಲ್ಲಿ ಹಲವು ಅಪ್ಲಿಕೇಶನ್‌ಗಳನ್ನು ತೆರೆದಿದ್ದರೆ ಹೆಚ್ಚಿನ ಪವರ್ ಅದಕ್ಕೆ ವ್ಯಯವಾಗುತ್ತದೆ. ಬ್ಯಾಗ್ರೌಂಡ್ ಅಪ್ಲಿಕೇಶನ್‌ ರನ್‌ ಆಗುತ್ತಿದ್ದರೂ ಸಹ ನಿಧಾನ ಚಾರ್ಜಿಂಗ್‌ಗೆ ಮತ್ತೊಂದು ಕಾರಣವಾಗಿರುತ್ತದೆ. ಇನ್ನೊಂದು ಚಾರ್ಜಿಂಗ್‌ನಲ್ಲಿರುವಾಗ ಮೊಬೈಲ್ ಬಳಕೆ ಮಾಡುತ್ತಿದ್ದರೆ ಇದರಿಂದಾನೂ ಚಾರ್ಜ್‌ ನಿಧಾನವಾಗಿ ಆಗುತ್ತದೆ.

ಗೂಗಲ್ ಪ್ಲೇ ಸ್ಟೋರ್ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖವಾಗಿದೆ. ಇವು ಹೊಸ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಬೇಕಾಗಿದೆ. ಸಾಮಾನ್ಯವಾಗಿ ಆಪ್ ಇನ್‌ಸ್ಟಾಲ್ ಮಾಡುವಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಏನಾದರೂ ಆ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಪ್ಲೇ ಸ್ಟೋರ್‌ ಆಪ್‌ ಓಪನ್‌ ಮಾಡಿ ಅಲ್ಲಿ ಕಾಣಿಸುವ ‘ಫೋರ್ಸ್‌ ಸ್ಟಾಪ್‌’ ಅಥವಾ ‘ಕ್ಲಿಯರ್‌ ಕ್ಯಾಶ್’ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ದೋಷಪೂರಿತ ಅಪ್ಲಿಕೇಶನ್

ಕೆಲವೊಂದು ದೋಷಪೂರಿತ ಅಪ್ಲಿಕೇಶನ್ ಅಥವಾ ಸ್ಟೋರೇಜ್‌ನಿಂದಲೂ ಸಮಸ್ಯೆಗಳು ಕಂಡುಬರುತ್ತದೆ. ಮೊದಲಿಗೆ ಸಮಸ್ಯೆಯನ್ನು ಪತ್ತೆ ಮಾಡಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ರಿಮೂವ್‌ ಮಾಡಿ. ಈ ವಿಧಾನದಿಂದ ಸಮಸ್ಯೆ ಬಗೆಹರಿಯದಿದ್ದರೆ ಗೂಗಲ್‌ ಪ್ಲೇ ಸ್ಟೋರ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ ಮತ್ತೇ ಹೊಸದಾಗಿ ಇನ್‌ಸ್ಟಾಲ್‌ ಮಾಡಿ. ನಂತರ ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಸ್ಟೋರೇಜ್‌ ಇದೆಯೇ ಎಂಬುದನ್ನು ತಿಳಿದುಕೊಂಡು ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಿ.

ಫುಲ್‌ ಸ್ಕ್ರೀನ್‌ ಗೆಸ್ಚರ್ ಆಧಾರಿತ ನ್ಯಾವಿಗೇಶನ್ ಅನ್ನು ಬಳಸುವ ಸಾಮರ್ಥ್ಯವನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಹೊಂದಿದೆ. ಅದಕ್ಕೆ ಮಿಗಿಲಾಗಿ ಗೆಸ್ಟರ್ ನ್ಯಾವಿಗೇಶನ್‌ಗೆ ಹೊಂದಿಕೆಯಾದ ಮೂರನೇ ವ್ಯಕ್ತಿಯ ಲಾಂಚರ್‌ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಅದನ್ನು ನಿಮ್ಮ ಮೊಬೈಲ್‌ನಿಂದ ಮೊದಲು ಡಿಲೀಟ್ ಮಾಡಿ.

ಸ್ಮಾರ್ಟ್‌ಫೋನ್‌ ಸ್ಲೋ

ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸ್ಮಾರ್ಟ್‌ಫೋನ್‌ನ ‘ಸೆಟ್ಟಿಂಗ್ಸ್‌’ ವಿಭಾಗಕ್ಕೆ ಹೋಗಿ ಅಲ್ಲಿ ‘ಆಪ್ ‘ ಆಯ್ಕೆಯ ಮೇಲೆ ಟ್ಯಾಪ್ ಮಾಡಿ ನಂತರ ‘ಡೀಫಾಲ್ಟ್ ಆಪ್’ ಎಂದು ಕಾಣುವ ಆಯ್ಕೆಯ ಮೇಲೆ ಒತ್ತಿದ್ದಾಗ, ‘ಹೋಮ್ ಆಪ್’ ಆಯ್ಕೆ ಬರುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದಾಗ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.

ಮೊಬೈಲ್ ಡೇಟಾ, ವೈ-ಫೈ ಸಮಸ್ಯೆ ಕಾಡುತ್ತಿದೆಯೇ?

ಹೆಚ್ಚಿನ ಮೊಬೈಲ್‌ ಬಳಕೆದಾರರು ಡೇಟಾ ಅಥವಾ ವೈ-ಫೈ ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಅದಕ್ಕೆ ಇಲ್ಲಿದೆ ಸುಲಭ ಪರಿಹಾರ. ವೈ-ಫೈ ಕೆಲಸ ಮಾಡುತ್ತಿಲ್ಲ ಎಂದರೆ ನೀವು ವೈ-ಫೈ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ವೈ–ಪೈ ಆನ್ ಹಾಗೂ ಆಫ್‌ ಮಾಡಿ. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ ವೈ-ಫೈ ರೂಟರ್‌ನಲ್ಲಿಯೇ ಏನಾದರೂ ಸಮಸ್ಯೆ ಇದೆ ಎಂದರ್ಥ. ನಂತರ ಮೊಬೈಲ್‌ನ್ನು ರೀಸ್ಟಾರ್ಟ್ ಮಾಡಿ.

ಡೇಟಾದಲ್ಲಿ ಸಮಸ್ಯೆ

ಡೇಟಾದಲ್ಲಿ ಸಮಸ್ಯೆ ಇದ್ದಲ್ಲಿ ಒಮ್ಮೆ ಆಫ್‌ ಅಥವಾ ಆನ್ ಮಾಡುವ ಪ್ರಕ್ರಿಯೆ ಮಾಡಿ. ನಂತರ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ. ಈಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹೀಗೆ ಮಾಡಿದ್ದರೂ ಸಮಸ್ಯೆ ಪರಿಹಾರವಾಗದಿದ್ದರೆ ನೆಟ್‌ವರ್ಕ್ ಸೆಟ್ಟಿಂಗ್‌ಗೆ ಹೋಗಿ ‘ಆಕ್ಸೆಸ್ ಪಾಯಿಂಟ್ ನೇಮ್ಸ್’ ಆಯ್ಕೆ ಮಾಡಿ ಅಲ್ಲಿ ಬೇರೆ ಆಯ್ಕೆಯನ್ನು ಟ್ಯಾಪ್‌ ಮಾಡಿ.

ಕ್ರ್ಯಾಶ್ ಆಪ್‌

ಕೆಲವು ಸಲ ಆಪ್‌ಗಳು ಆಗಾಗ್ಗೆ ಕ್ರ್ಯಾಶ್ ಆಗುತ್ತಿರುತ್ತವೆ. ಇದಕ್ಕೆ ಕಾರಣ ಅಪ್‌ಗ್ರೇಡ್‌. ಈ ಸಮಸ್ಯೆಯನ್ನು ಪರಿಹರಿಸಲು ನೀವು ಮಾಡಬೇಕಿರುವುದು ‌ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಅಲ್ಲಿ ‘ಅಬೌಟ್’ ಕಾಣುತ್ತದೆ, ಅದರ ಮೇಲೆ ಟ್ಯಾಪ್‌ ಮಾಡಿ ನಂತರ ಸ್ಕ್ರಾಲ್ ಮಾಡಿ. ಆಗ ಕೊನೆಯ ಬಾರಿ ಆಪ್ ಯಾವಾಗ ಅಪ್‌ಡೇಟ್‌ ಆಗಿದೆ ಎಂಬುದು ತಿಳಿಸುತ್ತದೆ. ಅದರ ಆಧಾರದ ಮೇಲೆ ಅಪ್‌ಡೇಟ್ ಮಾಡಬೇಕಾ ಅಥವಾ ಹೊಸದಾಗಿ ಇನ್‌ಸ್ಟಾಲ್ ಮಾಡಬೇಕಾ ಎಂದು ತಿಳಿಯಿರಿ.

ಆಪ್ಸ್‌

ಒಂದು ವೇಳೆ ನಿಮ್ಮ ಸಮಸ್ಯೆಗಳು ಪರಿಹಾರವಾಗದಿದ್ದರೆ ‘ಆಪ್ಸ್‌’ ವಿಭಾಗಕ್ಕೆ ಹೋಗಿ ಕ್ರ್ಯಾಶಿಂಗ್ ಅಪ್ಲಿಕೇಶನ್ ಅನ್ನು ಹುಡುಕಿ ಅಪ್ಲಿಕೇಶನ್ ಡೇಟಾ ಮತ್ತು ಸ್ಟೋರೇಜ್‌ ಅನ್ನು ಕ್ಲಿಯರ್‌ ಮಾಡಬಹುದು. ಇದರಿಂದ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.
‌‌
ಈ ಮೇಲಿನ ಸಮಸ್ಯೆಗಳು ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಸಾಮಾನ್ಯವಾಗಿದ್ದು, ಮೇಲೆ ಹೇಳಿದ ವಿಧಾನದಂತೆ ಅನುಸರಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..