
ನ್ಯೂಸ್ ಆ್ಯರೋ : ಎಲಾನ್ ಮಸ್ಕ್ ಅವರು ಟ್ವಿಟರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಪಡೆಯುತ್ತಿದ್ದಂತೆ ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ಟ್ವಿಟರನ್ನು ವಶಕ್ಕೆ ಪಡೆದ ಕೆಲವೇ ಗಂಟೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಭಾರತ ಮೂಲದ ಮೂವರನ್ನು ವಜಾ ಮಾಡುವ ಕಾರುಬಾರು ಶುರು ಮಾಡಿದ್ದ ಎಲಾನ್ ಮಸ್ಕ್ ಅವರು, ಇದೀಗ ಟ್ವಿಟರ್‌ನಲ್ಲಿ ಹೊಸ ಬದಲಾವಣೆಗಳನ್ನು ತರಲು ಸಜ್ಜಾಗುತ್ತಿದ್ದಾರೆ.
ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಟ್ವಿಟರ್ ಪ್ರೊಫೈಲ್ ಹೆಸರಿನ ಪಕ್ಕದಲ್ಲಿ ಈತನಕ ಉಚಿತವಾಗಿ ಇರುತ್ತಿದ್ದ ನೀಲಿ ಟಿಕ್ ಮಾರ್ಕ್‌ಗೆ ಶುಲ್ಕ ವಿಧಿಸಲು ಮಸ್ಕ್ ಚಿಂತನೆ ನಡೆಸಿದ್ದಾರೆ. ಇಂತಿಷ್ಟು ಹಣ ಪಾವತಿಸುವ ಯೋಜನೆ ರೂಪಿಸಿದ್ದು, ಈ ಮೂಲಕ ಬಳಕೆದಾರರ ಜೇಬಿಗೆ ಕತ್ತರಿ ಪ್ರಯೋಗಿಸಲು ಸಜ್ಜಾಗಿದ್ದಾರೆ.
ನೀಲಿ ಟಿಕ್‌ಗೆ ಅವರು $ 19.99 (ಸುಮಾರು ₹ 1,600) ಗೆ ಹೆಚ್ಚಿಸಲು ಚಿಂತಿಸಿದೆ. ಈಗಾಗಲೇ ಸದಸ್ಯರಾಗಿರುವವರು ತಮ್ಮ ನೀಲಿ ಚುಕ್ಕೆಯನ್ನು ಉಳಿಸಿಕೊಳ್ಳಲು ಚಂದಾದಾರರಾಗಲು 90 ದಿನಗಳನ್ನು ಕಾಲಾವಕಾಶ ನೀಡುವ ಚಿಂತನೆಯಿದೆ.
ಏನೀದು ನೀಲಿ ಟಿಕ್?

ಟ್ವಿಟರ್‌ನ ನೀಲಿ ಟಿಕ್ ಬಗ್ಗೆ ತಿಳಿಯುವುದಾದರೆ ಅವರು ಟ್ವಿಟರ್ ಸದಸ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ. ಟ್ವಿಟರ್‌ನ ಚಂದಾದಾರಿಕೆಯು ಟ್ವೀಟ್‌ಗಳನ್ನು ಸಂಪಾದಿಸುವುದು ಮತ್ತು ರದ್ದುಗೊಳಿಸುವಂತಹ ವಿಶೇಷತೆಯನ್ನು ಹೊಂದಿರುತ್ತದೆ.
ಇನ್ನೂ ಮುಂದಿನ ದಿನಗಳಲ್ಲಿ ಟ್ವಿಟರ್ ನವೀನತೆಗಳೊಂದಿಗೆ ಹೊರಬರಲಿದ್ದು, ಈ ಸಂಬಂಧ ಮಸ್ಕ್ ತಮ್ಮ ಎಂಜಿನಿಯರ್‌ಗಳಿಗೆ ಗಡುವನ್ನು ನೀಡಿದ್ದಾರೆ. ಮಸ್ಕ್ ಇನ್ನೂ ಯಾವುದಕ್ಕೆ ಶುಲ್ಕ ವಿಧಿಸುತ್ತಾರೆ, ಏನೆಲ್ಲ ಗ್ರಾಹಕಸ್ನೇಹಿಯಾಗಿ ಬದಲಾವಣೆ ತರುತ್ತಾರೆ ಎಂಬುದು ಬಳಕೆದಾರರಲ್ಲಿ ಕುತೂಹಲ ಕೆರಳಿಸಿದೆ.
44 ಶತಕೋಟಿ ಡಾಲರ್‌ಗೆ ಟ್ವಿಟರ್ ಅನ್ನು ಖರೀದಿಸುವ ಪ್ರಕ್ರಿಯೆಯನ್ನು ಗುರುವಾರ ರಾತ್ರಿ ಪೂರ್ಣಗೊಳಿಸುವ ಮೂಲಕ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರು.