ಫೋನ್‌ಪೇನಲ್ಲಿ ದಿನಕ್ಕೆ ಎಷ್ಟು ಹಣ ವರ್ಗಾಯಿಸಬಹುದು ಗೊತ್ತಾ..? ಫೋನ್‌ಪೇ ಬಳಕೆಯ ಕೆಲ ಉಪಯುಕ್ತ ಮಾಹಿತಿ ಇಲ್ಲಿದೆ..

ನ್ಯೂಸ್ ಆ್ಯರೋ : ದೇಶದಲ್ಲಿ ಇಂದು ಬಹುತೇಕ ವಹಿವಾಟುಗಳು ಡಿಜಿಟಲ್ ಪೇಮೆಂಟ್ ಮೂಲಕವೇ ನಡೆಯುತ್ತಿವೆ. ಎಲ್ಲ ವರ್ಗದ ಗ್ರಾಹಕರು ಯುಪಿಐ (UPI) ಆಧಾರಿತ ಡಿಜಿಟಲ್ ಪೇಮೆಂಟ್‌ನತ್ತ ಒಲವು ತೋರುತ್ತಿದ್ದಾರೆ. ಮುಖ್ಯವಾಗಿ ಗೂಗಲ್‌ಪೇ, ಫೋನ್‌ಪೇ, ಪೇಟಿಎಮ್, ಅಮೆಜಾನ್ ಪೇ ಪ್ಲಾಟ್‌ಫಾರ್ಮ್‌ಗಳು ಪ್ರಮುಖ ಯುಪಿಐ ಆ್ಯಪ್‌ಗಳಾಗಿ ಗ್ರಾಹಕರನ್ನು ಆಕರ್ಷಿಸುತ್ತಿವೆ.
ಇವುಗಳ ಪೈಕಿ ಫೋನ್‌ಪೇ (PhonePe) ಹೆಚ್ಚು ಬಳಕೆಯ ಯುಪಿಐ ಅಪ್ಲಿಕೇಶನ್ ಆಗಿ ಬೆಳೆಯುತ್ತಿದೆ. ಫೋನ್‌ಪೇ ಮೂಲಕ ಗ್ರಾಹಕರು ಹಣವನ್ನು ಯಾರಿಗೆ ಬೇಕಾದರೂ ವರ್ಗಾಯಿಸಬಹುದಾಗಿದೆ. ಮೊಬೈಲ್, ಡಿಟಿಎಚ್, ವಿಮೆ ಕಂತು ಪಾವತಿ, ಡೇಟಾ ಕಾರ್ಡ್‌ಗಳನ್ನು ಸುಲಭವಾಗಿ ರೀಚಾರ್ಜ್ ಮಾಡಬಹುದು. ಇದರೊಂದಿಗೆ ಯುಟಿಲಿಟಿ ಪಾವತಿಗಳನ್ನು ಮಾಡಬಹುದು ಮತ್ತು ಚಿನ್ನವನ್ನು ಖರೀದಿಸಬಹುದು. ಮ್ಯೂಚುವಲ್ ಫಂಡ್‌ನಂತಹ ಕೆಲವು ಹೂಡಿಕೆಯ ಆಯ್ಕೆಗಳು ಸಿಗುತ್ತವೆ.
ಕೆಲವು ಬಳಕೆದಾರರಿಗೆ ಫೋನ್‌ಪೇನಲ್ಲಿ ದಿನಕ್ಕೆ ಗರಿಷ್ಠ ಹಣ ವರ್ಗಾವಣೆ ಅಥವಾ ವಹಿವಾಟಿನ ಮೊತ್ತದ ಮಿತಿ ಎಷ್ಟು ಎನ್ನುವ ಬಗ್ಗೆ ಗೊಂದಲ ಇರುತ್ತದೆ. ಫೋನ್‌ಪೇಗೆ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಹೇಗೆ? ಖಾತೆಯ ಬ್ಯಾಲೆನ್ಸ್ ನೋಡುವುದು ಹೇಗೆ? ಎಂಬ ಸಾಮಾನ್ಯ ಸಂಗತಿಯನ್ನು ತಿಳಿದುಕೊಳ್ಳೊಣ.
ಗರಿಷ್ಠ ₹ 1 ಲಕ್ಷ ಮಿತಿ: ಫೋನ್‌ಪೇ ಮೂಲಕ ಬಳಕೆದಾರರು ಬ್ಯಾಂಕ್ ಖಾತೆಗೆ ದಿನಕ್ಕೆ ಗರಿಷ್ಠ ₹ 1,00,000 ವರ್ಗಾಯಿಸಬಹುದು
ಒಮ್ಮೆ ಈ ಮಿತಿ ದಾಟಿದರೆ UPI ವಹಿವಾಟುಗಳು ವಿಫಲಗೊಳ್ಳುತ್ತವೆ. ಖಾತೆಯನ್ನು ಅವಲಂಬಿಸಿ ದಿನಕ್ಕೆ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಅನುಮತಿ ನೀಡಲಾಗುತ್ತದೆ.
ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಹೇಗೆ?:
- ಹಂತ 1: ಗೂಗಲ್ ಸ್ಟೋರ್‌ನಿಂದ ಫೋನ್‌ಪೇ ಆ್ಯಪ್ ಡೌನ್‌ಲೋಡ್ ಮಾಡಿ.
- ಹಂತ 2: ಇನ್‌ಸ್ಟಾಲ್ ಆದ ನಂತರ ಫೋನ್‌ಪೇ ಆ್ಯಪ್ ತೆರೆಯಿರಿ
- ಹಂತ 3: ಬಳಿಕ My Money Page ಹೋಗಿ
ಹಂತ 4: ಪಾವತಿ ವಿಧಾನಗಳ ಆಯ್ಕೆಯಡಿ ಬ್ಯಾಂಕ್ ಖಾತೆಗಳನ್ನು ನಮೂದಿಸಿಹಂತ 5: ‘ಹೊಸ ಬ್ಯಾಂಕ್ ಖಾತೆಯನ್ನು ಸೇರಿಸಿ’ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ. - ಹಂತ 6: ಅಪ್ಲಿಕೇಶನ್ ನಿಮ್ಮ ಖಾತೆಯ ವಿವರಗಳನ್ನು ತರುತ್ತದೆ
ಹಂತ 7: ‘ಸೆಟ್ ಯುಪಿಐ ಪಿನ್’ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಯುಪಿಐ ಪಿನ್ ಅನ್ನು ಹೊಂದಿಸಿ - ಹಂತ 8: ನಿಮ್ಮ ಡೆಬಿಟ್ ಅಥವಾ ಎಟಿಎಂ ಕಾರ್ಡ್ ಸಂಖ್ಯೆ ಮತ್ತು ಮುಕ್ತಾಯ ದಿನಾಂಕದ ಕೊನೆಯ ಆರು ಅಂಕೆಗಳನ್ನು ನಮೂದಿಸಿ
- ಹಂತ 9: ಈಗ ನಿಮ್ಮ ಯುಪಿಐ ಪಿನ್ ಹೊಂದಿಸಲು ಸ್ವೀಕರಿಸಿದ ಒಟಿಪಿ ಬಳಸಿ
- ಹಂತ 10: ನಿಮ್ಮ ಬ್ಯಾಂಕ್ ಖಾತೆಯನ್ನು ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ.
ಖಾತೆಯ ಬ್ಯಾಲೆನ್ಸ್ ನೋಡುವುದು ಹೇಗೆ?
- ಹಂತ 1: ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ
- ಹಂತ 2: ಹಣ ವರ್ಗಾವಣೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ಹಂತ 3: ಬ್ಯಾಂಕ್ ಆಯ್ಕೆ ಮಾಡಿ
- ಹಂತ 4: UPI ಪಿನ್ ನಮೂದಿಸಿ
- ಹಂತ 5: ನಂತರ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಕಾಣಿಸುತ್ತದೆ.