1. Home
  2. Tech
  3. News
  4. ವಾಟ್ಸ್‌ಆ್ಯಪ್‌ನಲ್ಲಿಯೂ ಬಂತು ಕಮ್ಯುನಿಟಿ ಫೀಚರ್‌ – ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಸಂದೇಶ ರವಾನೆ, ಗೌಪ್ಯತೆಗೂ ಆದ್ಯತೆ

ವಾಟ್ಸ್‌ಆ್ಯಪ್‌ನಲ್ಲಿಯೂ ಬಂತು ಕಮ್ಯುನಿಟಿ ಫೀಚರ್‌ – ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಸಂದೇಶ ರವಾನೆ, ಗೌಪ್ಯತೆಗೂ ಆದ್ಯತೆ

ವಾಟ್ಸ್‌ಆ್ಯಪ್‌ನಲ್ಲಿಯೂ ಬಂತು ಕಮ್ಯುನಿಟಿ ಫೀಚರ್‌ – ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಸಂದೇಶ ರವಾನೆ, ಗೌಪ್ಯತೆಗೂ ಆದ್ಯತೆ
0

ನ್ಯೂಸ್‌ ಆ್ಯರೋ : ಮೆಟಾ ಮಾಲೀಕತ್ವದ ವಾಟ್ಸ್​ಆ್ಯಪ್ ತನ್ನ ಗ್ರಾಹಕರಿಗೆ ‘ಕಮ್ಯುನಿಟಿ’ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದೆ. ಪ್ರತಿಸ್ಪರ್ಧಿ ಟೆಲಿಗ್ರಾಂ ಆ್ಯಪ್‌ನಲ್ಲಿ ಈಗಾಗಲೇ ಲಭ್ಯವಿದ್ದ ಈ ಫೀಚರ್‌ ಅನ್ನು ವ್ಯಾಟ್ಸ್‌ಆ್ಯಪ್‌ನಲ್ಲಿಯೂ ಪರಿಚಯಿಸಲಾಗಿದೆ.

ಹೆಚ್ಚು ಜನರಿರುವ ದೊಡ್ಡ ಗುಂಪುಗಳನ್ನು (ವಾಟ್ಸ್‌ಆ್ಯಪ್‌ ಗ್ರೂಪ್‌)ಗಳನ್ನು ರಚಿಸಲು ಇದು ಅನುವು ಮಾಡಿಕೊಡುತ್ತಿದೆ. ಹೆಚ್ಚು ಜನರಿಗೆ ವಿಡಿಯೊ ಕರೆ ಮಾಡುವ, ಇನ್‌–ಚಾಟ್‌ ಪೋಲ್‌ (ಅಭಿಪ್ರಾಯ ಸಂಗ್ರಹ) ದಂಥ ವಿಶೇಷತೆಗಳನ್ನೂ ವಾಟ್ಸ್‌ಆ್ಯಪ್‌ ಗ್ರಾಹಕರಿಗೆ ಕಲ್ಪಿಸಿದೆ.

ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ವಾಟ್ಸ್​ಆ್ಯಪ್ ಕಮ್ಯುನಿಟಿ ಫೀಚರ್ ಎಂದರೇನು? ಕಮ್ಯುನಿಟಿ ಫೀಚರ್‌ನಲ್ಲಿ ಗ್ರಾಹಕರಿಗೆ ಏನು ಪ್ರಯೋಜನವಿದೆ? ಬಳಸುವುದು ಹೇಗೆ? ಎಂಬುದನ್ನು ತಿಳಿಯೋಣ.

ವಿವಿಧ ಚಾಟ್ ಗುಂಪುಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ‘ವಾಟ್ಸ್‌ಆ್ಯಪ್‌ ಕಮ್ಯುನಿಟಿ’ಯ ವಿಶೇಷತೆ. ಇದರ ಮೂಲಕ ಸಾವಿರಾರು ಮಂದಿಗೆ ಒಂದೇ ಬಾರಿಗೆ ಸಂದೇಶ ರವಾನಿಸಬಹುದು. ಈ ವೈಶಿಷ್ಟ್ಯವು ಕೆಲಸದ ಸ್ಥಳಗಳು, ಸುದ್ದಿ ಪೋರ್ಟಲ್‌ ಅಥವಾ ಶಾಲೆಗಳಲ್ಲಿ ಸಮರ್ಥವಾಗಿ ಬಳಕೆ ಬರಲಿದೆ. ಸಮಾನ ಆಸಕ್ತಿ ಹೊಂದಿರುವ ಜನರಿಗೆ ಚಾಟ್ ಮಾಡಲು ಮತ್ತು ಸಂವಹನ ನಡೆಸಲು ಇದು ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ.

ಕಮ್ಯುನಿಟಿ ಫೀಚರ್‌ನ ಮೂಲಕ 50 ವಾಟ್ಸ್​ಆ್ಯಪ್ ಗುಂಪುಗಳನ್ನು ಒಟ್ಟಿಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಇಷ್ಟು ದಿನ ಕೇವಲ ಗ್ರೂಪ್ ಕ್ರಿಯೇಟ್ ಮಾಡಿ ಅದರಲ್ಲಿ ಗ್ರಾಹಕರಿಗೆ ಬೇಕಾದವರ ನಂಬರ್​ ಅನ್ನು ಸೇರಿಸುವ ಅವಕಾಶವಿತ್ತು. ಆದರೆ, ಇನ್ನು ಬೇರೆ ಬೇರೆ ಗ್ರೂಪ್​ಗಳನ್ನು ಈ ಕಮ್ಯುನಿಟಿಯಲ್ಲಿ ಸೇರಿಸಬಹುದಾಗಿದೆ.

ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಮ್ಯುನಿಟಿ ಫೀಚರ್ ಅನ್ನು ಬಳಸಲು ಗ್ರಾಹಕರು ತಮ್ಮ ಚಾಟ್ಸ್‌ನ ಮೇಲ್ಭಾಗದಲ್ಲಿ ಕಾಣುವ ನ್ಯೂ ಕಮ್ಯುನಿಟಿಸ್ ಟ್ಯಾಬ್ ಮೇಲೆ ಟ್ಯಾಪ್ ಮಾಡಬೇಕು. ಅದೇ ರೀತಿ, ಐಒಎಸ್‌ನಲ್ಲಿ ಚಾಟ್‌ನ ಬಾಟಮ್‌ನಲ್ಲಿರುವ ಆಪ್ಷನ್ ಮೇಲೆ ಟ್ಯಾಪ್ ಮಾಡಬೇಕು. ಒಮ್ಮೆ ನೀವು, ವಾಟ್ಸ್ಆ್ಯಪ್‌ನಲ್ಲಿ ಕಮ್ಯುನಿಟಿ ಸೇರಿಕೊಂಡ ಬಳಿಕ, ಲಭ್ಯವಿರುವ ಗ್ರೂಪ್‌ಗಳಿಂದ ನಿಮಗೆ ಬೇಕಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದು. ಜತೆಗೆ, ಅಡ್ಮಿನ್‌ಗಳು ಕಮ್ಯುನಿಟಿಯಲ್ಲಿರುವ ಪ್ರತಿಯೊಬ್ಬರಿಗೆ ಪ್ರಮುಖ ಅಪ್‌ಡೇಟ್ಸ್ ಕಳುಹಿಸಬಹುದು.

ವಾಟ್ಸ್​ಆ್ಯಪ್ ಕಮ್ಯುನಿಟಿ ರಚಿಸುವುದು ಹೇಗೆ ಗೊತ್ತಾ?

  • ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಬೇಕು.
  • ನ್ಯೂ ಚಾಟ್​ ಮೇಲೆ ಕ್ಲಿಕ್ ಮಾಡಿ ನಂತರ ನ್ಯೂ ಕಮ್ಯುನಿಟಿ ಸೆಲೆಕ್ಟ್​​ ಮಾಡಬೇಕು.
  • ಕಮ್ಯುನಿಟಿ ಹೆಸರನ್ನು ಎಂಟರ್ ಮಾಡಿ, ಡಿಸ್ಟ್ರಿಪ್ಷನ್ ಹಾಗೂ ಪ್ರೊಫೈಲ್ ಫೋಟೊ ಹಾಕಿ, ಕಮ್ಯುನಿಟಿ ಹೆಸರು ಹಾಕಬೇಕು (24 ಅಕ್ಷರಗಳನ್ನು ಮೀರುವಂತಿಲ್ಲ).
  • ಕ್ಯಾಮೆರಾ ಐಕಾನ್ ಟ್ಯಾಪ್ ಮಾಡುವ ಮೂಲಕವೂ ಡಿಸ್ಕ್ರಿಪ್ಷನ್ ಹಾಗೂ ಕಮ್ಯುನಿಟಿ ಸೇರಿಸಬಹುದು.
  • ಈಗಿರುವ ಗ್ರೂಪ್​ ಮೇಲೆ ಕ್ಲಿಕ್ ಮಾಡಿ ಅಥವಾ ಕ್ರಿಯೇಟ್ ನ್ಯೂ ಗ್ರೂಪ್​ ಮೇಲೆ ಕ್ಲಿಕ್ ಮಾಡಬೇಕು.
  • ಗ್ರೂಪ್​ಗಳನ್ನು ಸೇರಿಸಿ ಮುಗಿದ ಬಳಿಕ ಕ್ರಿಯೇಟ್ ಎಂಬುದನ್ನು ಕ್ಲಿಕ್ ಮಾಡಿ

ಗೌಪ್ಯತೆಗೆ ಆದ್ಯತೆ:

ಕಮ್ಯುನಿಟಿ ಫೀಚರ್‌ನಲ್ಲಿ ಗುಂಪು ನಿರ್ವಾಹಕರಿಗೆ (ಗ್ರೂಪ್‌ ಆಡ್ಮಿನ್‌)ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಜತೆಗೆ ಸದಸ್ಯರ ಗೌಪ್ಯತೆಗೂ ಆದ್ಯತೆ ನೀಡಲಾಗಿದೆ. ಗ್ರೂಪ್‌ ಆಡ್ಮಿನ್‌ಗಳಿಗೆ ಗುಂಪುಗಳ ಮೇಲೆ ನಿಯಂತ್ರಣವನ್ನು ನೀಡಲಾಗಿದೆ. ಗುಂಪು ನಿರ್ವಾಹಕರು ಸಮುದಾಯದ ಮೂಲಕ ಯಾವುದೇ ರೀತಿಯ ನವೀಕರಣಗಳನ್ನು ಹಂಚಿಕೊಳ್ಳಬಹುದು.

ಕಮ್ಯುನಿಟಿ ಗ್ರೂಪ್‌ನಲ್ಲಿರುವ ಸದಸ್ಯರ ಮಾಹಿತಿ ಕಮ್ಯುನಿಟಿ ಆಡ್ಮಿನ್‌ಗಳಿಗೆ ಹೊರತುಪಡಿಸಿ ಉಳಿದವರಿಗೆ ಗೊತ್ತಾಗುವುದಿಲ್ಲ. ಗ್ರೂಪ್‌ನಿಂದ ಹೊರ ಹೋದರೂ ಇತರ ಸದಸ್ಯರಿಗೆ ಗೊತ್ತಾಗುವುದಿಲ್ಲ. ಹೀಗಾಗಿ, ಮಹಿಳೆಯರಿಗೆ ಇದು ವರದಾನ ಎಂದೇ ಹೇಳಬಹುದು. ಆದರೆ, ಗ್ರೂಪ್‌ನಲ್ಲಿರುವ ಸದಸ್ಯರಿಗೆ ಗ್ರೂಪ್‌ನಲ್ಲಿ ಚಾಟ್‌ ಮಾಡಲು ಅವಕಾಶವಿಲ್ಲ.

ಕಮ್ಯುನಿಟಿ ಹೊರತಾಗಿ ವಾಟ್ಸ್‌ಆ್ಯಪ್‌ ಇತರ ಕೆಲವು ಫೀಚರ್​ಗಳನ್ನು ಸಹ ಪ್ರಾರಂಭಿಸಿದೆ. 32 ಜನರೊಂದಿಗೆ ವಿಡಿಯೊ ಕರೆ ಮತ್ತು ಗುಂಪುಗಳಲ್ಲಿ 1024 ಬಳಕೆದಾರರನ್ನು ಸೇರಿಸುವಂತಹ ವೈಶಿಷ್ಟ್ಯಗಳನ್ನು ಸಹ ನೀಡಿದೆ. ಇದರಿಂದಾಗಿ ಬಳಕೆದಾರರು ಈಗ ಉತ್ತಮ ಸೌಲಭ್ಯಗಳನ್ನು ಪಡೆದಂತಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..