1. Home
  2. Tech
  3. News
  4. ವಾಟ್ಸ್ಯಾಪ್ ನಲ್ಲೂ ಬರಲಿದೆ ಎಡಿಟ್ ಬಟನ್ – ಇನ್ನು ಮೆಸೇಜ್ ಬರೆಯೋದು ತಪ್ಪಾದ್ರೆ ಡಿಲೀಟ್ ಮಾಡಬೇಕೆಂದಿಲ್ಲ..!!

ವಾಟ್ಸ್ಯಾಪ್ ನಲ್ಲೂ ಬರಲಿದೆ ಎಡಿಟ್ ಬಟನ್ – ಇನ್ನು ಮೆಸೇಜ್ ಬರೆಯೋದು ತಪ್ಪಾದ್ರೆ ಡಿಲೀಟ್ ಮಾಡಬೇಕೆಂದಿಲ್ಲ..!!

ವಾಟ್ಸ್ಯಾಪ್ ನಲ್ಲೂ ಬರಲಿದೆ ಎಡಿಟ್ ಬಟನ್ – ಇನ್ನು ಮೆಸೇಜ್ ಬರೆಯೋದು ತಪ್ಪಾದ್ರೆ ಡಿಲೀಟ್ ಮಾಡಬೇಕೆಂದಿಲ್ಲ..!!
0

ನ್ಯೂಸ್ ಆ್ಯರೋ : ಜನಪ್ರಿಯ ಮೈಕೋ ಬ್ಲಾಗಿಂಗ್ ಟ್ವಿಟರ್ ಎಡಿಟ್ ಬಟನ್ ಪರಿಚಯಿಸಿದ ಬೆನ್ನಲ್ಲೇ, ಮತ್ತೊಂದು ಜನಪ್ರಿಯ ಸೋಷಿಯಲ್ ಮೀಡಿಯಾ ವಾಟ್ಸ್‌ಆ್ಯಪ್ ಕೂಡ ಎಡಿಟ್ ಫೀಚರ್ ಅಳವಡಿಸಲು ಮುಂದಾಗಿದೆ. ಅಂದರೆ, ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡಲು ಈ ಫೀಚರ್ ಅವಕಾಶ ಕಲ್ಪಿಸಲಿದೆ. ಒಂದೊಮ್ಮೆ ವಾಟ್ಸ್‌ಆ್ಯಪ್ ಮಾಡುವಾಗ ಏನಾದರೂ ತಪ್ಪುಗಳಾಗಿದ್ದರೆ, ಈ ಎಡಿಟ್ ಫೀಚರ್ ಬಳಸಿಕೊಂಡು ಸರಿಪಡಿಸಬಹುದು..!

ಫೇಸ್‌ಬುಕ್ ಒಡೆತನ ಹೊಂದಿರುವ ಮೆಟಾ ಮಾಲೀಕತ್ವದ ವಾಟ್ಸ್‌ಆಪ್ ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಅಪ್‌ಡೇಟ್ಸ್ ಮತ್ತು ಹೊಸ ಫೀಚರ್‌ಗಳನ್ನು ಪರಿಚಯಿಸುತ್ತದೆ. ಈಗ ಅದೇ ರೀತಿಯಾಗಿ, ಎಡಿಟ್ ಫೀಚರ್ ಅಳವಡಿಸಲು ಮುಂದಾಗಿದೆ.

ಈಗಾಗಲೇ ಬಳಕೆದಾರರು ವಾಟ್ಸ್‌ಆ್ಯಪ್‌ನಲ್ಲಿ ದಿನಾಂಕ ಅನುಸಾರ ಮೆಸೇಜ್‌ಗಳನ್ನು ಶೋಧಿಸಬಹುದು. ಹಾಗೆಯೇ, ತಮ್ಮ ಆನ್‌ಲೈನ್ ಸ್ಟೇಟಸ್ ಕೂಡ ಹೈಡ್ ಮಾಡಬಹುದು. ಈಗ ಅದೇ ರೀತಿ, ಮೆಸೇಜ್ ಎಡಿಟ್ ಮಾಡುವ ಸೌಲಭ್ಯವನ್ನು ಕಲ್ಪಿಸಲಿದೆ. ಒಂದೊಮ್ಮೆ ಈ ಸೌಲಭ್ಯ ಸಾಧ್ಯವಾದರೆ, ಎಡಿಟ್ ಆದ ಸಂದೇಶಕ್ಕೆ ‘edited’ ಎಂಬ ಲೇಬಲ್ ಅಂಟಿಸಲಿದೆ. ಇದರಿಂದಾಗಿ ಈ ಸಂದೇಶವನ್ನು ಎಡಿಟ್ ಮಾಡಲಾಗಿದೆ ಎಂಬುದು ಇತರರಿಗೂ ಗೊತ್ತಾಗುತ್ತದೆ.

ಈ ಬಗ್ಗೆ ವಾಬೇಟಾಇನ್​ಫೊ ವರದಿ ಮಾಡಿದ್ದು, ವಾಟ್ಸ್​ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದ್ದು, ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ನೆರವಾಗಲಿದೆ.

ಸದ್ಯ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಲಭ್ಯವಿದ್ದು, ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ತಪ್ಪನ್ನು ತಿದ್ದಬಹುದಾಗಿದೆ.

WaBetaInfo ನ ವರದಿಯ ಪ್ರಕಾರ, ವಾಟ್ಸ್​ಆ್ಯಪ್​​ ಗ್ರೂಪ್‌ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿದೆ ಎಂದು ಹೇಳಲಾಗಿದೆ. ಆದಷ್ಟು ಬೇಗ ಈ ನೂತನ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆ.

ಇನ್ನೂ ಈಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಎಡಿಟ್ ಮೆಸೇಜ್ ಫೀಚರ್ ಇನ್ನೂ ಪ್ರಯೋಗ ಹಂತದಲ್ಲಿದ್ದು, ಮೆಸೇಜ್ ಕಳುಹಿಸಿದ ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಎಡಿಟ್ ಮಾಡಲು ಸಾಧ್ಯವಾಗುವ ರೀತಿಯಲ್ಲಿ ಎಡಿಟ್ ಫೀಚರ್ ಇರಲಿದೆ ಎನ್ನಲಾಗುತ್ತಿದೆ.

ಕಳೆದ ಮೇ ತಿಂಗಳಲ್ಲಿ ಎಡಿಟ್ ಫೀಚರ್ ಬಗ್ಗೆ ವಾಟ್ಸ್‌ಆ್ಯಪ್ ಹೇಳಿಕೊಂಡಿತ್ತು. ಆದರೆ, ಅದೇನು ಆಯಿತೋ ಗೊತ್ತಿಲ್ಲ. ಸಡನ್ ಆಗಿ ಈ ಕಾರ್ಯದಿಂದ ವಾಟ್ಸ್‌ಆ್ಯಪ್ ಹಿಂದೆ ಸರಿಯಿತು. ಈಗ ಮತ್ತೆ ಅದೇ ಎಡಿಟ್ ಫೀಚರ್ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಎಡಿಟ್ ಫೀಚರ್ ಯಾವಾಗ ಬಳಕೆದಾರರಿಗೆ ಸಿಗಲಿದೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..