ನ್ಯೂಸ್ ಆ್ಯರೋ : ಜಗತ್ತಿನ ನಂಬರ್ ಒನ್ ಮೆಸ್ಸೇಜಿಂಗ್ ಆ್ಯಪ್ ಆಗಿರುವ ವಾಟ್ಸಾಪ್ ನಲ್ಲಿ ಗ್ರೂಪ್ ನ ಸದಸ್ಯರ ಮಿತಿಯನ್ನು ಇತ್ತೀಚೆಗಷ್ಟೇ 256 ರಿಂದ 512 ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಈ ಮಿತಿಯನ್ನು ಹೆಚ್ಚಿಸಲು ಮೆಟಾ ಒಡೆತನದ ವಾಟ್ಸಪ್ಪ್ ಮುಂದಾಗಿದೆ.
ಈ ವೈಶಿಷ್ಟ್ಯವು Android ಮತ್ತು iOS ಬಳಕೆದಾರರಿಗೆ WhatsApp ಬೀಟಾದಲ್ಲಿ ಈಗಾಗಲೇ ಲಭ್ಯವಿದ್ದು, ಬೀಟಾ ಟೆಸ್ಟಿಂಗ್ ಬಳಿಕ ಎಲ್ಲ ಆವೃತ್ತಿಯಲ್ಲಿಯೂ ಬರಲಿದೆ. ಎಂದು ವಾಟ್ಸಪ್ಪ್ ಗೆ ಸಂಬಂಧಿಸಿದ ಸುದ್ದಿಗಳನ್ನು ಬಿತ್ತರಿಸುವ WABetaInfo ದಲ್ಲಿ ತಿಳಿಸಲಾಗಿದೆ.
ಈಗಾಗಲೇ ಈ ಆಯ್ಕೆಯೂ ನಿಮ್ಮ ಫೋನ್ ನಲ್ಲಿ ಬಂದಿದ್ದರೆ ವಾಟ್ಸಾಪ್ ನಲ್ಲಿ ನಿಮ್ಮ ಗ್ರೂಪ್ ಓಪನ್ ಮಾಡಿ ಅದರಲ್ಲಿ ಸದಸ್ಯರ ಮಿತಿಯನ್ನು ಪರಿಶೀಲಿಸಿ ನೋಡಬಹುದು. ಒಂದು ವೇಳೆ ಇನ್ನೂ ಸದಸ್ಯರ ಮಿತಿ 512 ತೋರಿಸುತ್ತಿದ್ದರೆ ಚಿಂತಿಸಬೇಡಿ, ಶೀಘ್ರವೇ ಮುಂಬರುವ ಅಪ್ಡೇಟ್ ನಲ್ಲಿ ನೀವು ಈ ಆಯ್ಕೆಯನ್ನು ಪಡೆಯಲಿದ್ದೀರಿ.
ಒಟ್ಟಿನಲ್ಲಿ ವಾಟ್ಸಪ್ ಗ್ರೂಪ್ ನಲ್ಲಿ ಸದಸ್ಯರ ಮಿತಿ ಜಾಸ್ತಿ ಆದಷ್ಟು ನಿಮಗೆ ಹೆಚ್ಚು ಹೆಚ್ಚು ಜನರನ್ನು ಗ್ರೂಪಿ ಗೆ ಸೇರಿಸಲು ಅನುಕೂಲವಾಗುತ್ತದೆ. ಆದರೆ ಇದು ಗ್ರೂಪಿನ ಸದಸ್ಯರಿಗೆ ಕಿರಿ ಕಿರಿಯೂ ಆಗುವ ಸಾಧ್ಯತೆ ಇದೆ. ಗ್ರೂಪಿನಲ್ಲಿ ಸದಸ್ಯರ ಸಂಖ್ಯೆ ಜಾಸ್ತಿಯಾದಷ್ಟು ಗ್ರೂಪ್ ಮೆಸೇಜ್ ಗಳಿಂದ ತುಂಬಿ ಹೋಗಿ ಸದಸ್ಯರಿಗೆ ಕಿರಿ ಕಿರಿ ಎನಿಸುವ ಸಾಧ್ಯತೆ ಇದೆ, ಇಂತಹ ಸಂದರ್ಭಗಳಲ್ಲಿ ಗ್ರೂಪ್ ಅಡ್ಮಿನ್ ಗಳಿಗೆ ಮಾತ್ರ ಮೆಸೇಜ್ ಮಾಡುವ ಆಯ್ಕೆಯನ್ನು ಕೂಡ ನೀವು ಬಳಸಬಹುದು.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..