1. Home
  2. Tech
  3. News
  4. ವಾಟ್ಸಾಪ್‌ಗೆ ಬಂತು ಅನಿಮೇಟೆಡ್‌ ಅವತಾರ್‌ – ಅಪ್ಡೇಟೆಡ್ ಹೊಸ ಫೀಚರ್ಸ್‌ನಲ್ಲಿ ಏನೆಲ್ಲ ಇದೆ ಗೊತ್ತಾ?

ವಾಟ್ಸಾಪ್‌ಗೆ ಬಂತು ಅನಿಮೇಟೆಡ್‌ ಅವತಾರ್‌ – ಅಪ್ಡೇಟೆಡ್ ಹೊಸ ಫೀಚರ್ಸ್‌ನಲ್ಲಿ ಏನೆಲ್ಲ ಇದೆ ಗೊತ್ತಾ?

ವಾಟ್ಸಾಪ್‌ಗೆ ಬಂತು ಅನಿಮೇಟೆಡ್‌ ಅವತಾರ್‌ – ಅಪ್ಡೇಟೆಡ್ ಹೊಸ ಫೀಚರ್ಸ್‌ನಲ್ಲಿ ಏನೆಲ್ಲ ಇದೆ ಗೊತ್ತಾ?
0

ನ್ಯೂಸ್‌ ಆ್ಯರೋ : ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್‌ ಇದೀಗ ಹೊಸ ಫೀಚರ್ಸ್‌ನೊಂದಿಗೆ ಅಪ್‌ಡೇಟ್ ಆಗಿದೆ. ಇನ್ನು ಮುಂದೆ ಅನಿಮೇಟೆಡ್‌ ಅವತಾರ್‌ ಫೀಚರ್ಸ್‌ನೊಂದಿಗೆ ಬಳಕೆದಾರರಿಗೆ ವಾಟ್ಸಾಪ್ ಮತ್ತಷ್ಟು ಹತ್ತಿರವಾಗಲಿದೆ. ಈ ಕುರಿತು ಸಮಗ್ರವಾದ ಮಾಹಿತಿ ಇಲ್ಲಿದೆ.

ಏನಿದು ಅವತಾರ್ ಫೀಚರ್ಸ್‌?

ಈಗಾಗಲೇ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಅವತಾರ್‌ ಫೀಚರ್ಸ್‌ ಸೌಲಭ್ಯವಿದೆ. ಇದೀಗ ವಾಟ್ಸಾಪ್‌ಗೂ ಇದನ್ನು ಅಳವಡಿಸಿದ್ದು, ಈ ಮೂಲಕ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಿಲಿದೆ.

ಅವತಾರ್‌ ಸ್ಟಿಕ್ಕರ್:

ಒಮ್ಮೆ ಬಳಕೆದಾರರು ಅವತಾರ್‌ ಸ್ಟಿಕರ್ ಅನ್ನು ರಚಿಸಿದ ಬಳಿಕ ಸಂದೇಶ ರವಾನಿಸುವ ವೇಳೆ ಅವತಾರ್ ಪುಟ ತೆರೆದುಕೊಳ್ಳುತ್ತದೆ. ಇದನ್ನು ನಾವು ಸ್ಟಿಕ್ಕರ್ ರೀತಿಯಲ್ಲಿ ಇತರರಿಗೆ ಕಳುಹಿಸಬಹುದು. ಹಾಗೆಯೇ ಕೆಲವು iOS ಬೀಟಾ ಪರೀಕ್ಷಕರು ಟೆಸ್ಟ್‌ಫ್ಲೈಟ್ ಆಪ್‌ನಿಂದ iOS 22.23.0.71 ಅಪ್‌ಡೇಟ್‌ಗಾಗಿ ವಾಟ್ಸಾಪ್‌ ಬೀಟಾವನ್ನು ಸ್ಥಾಪಿಸಿದ ನಂತರ ಅವತಾರ್ ಅನ್ನು ಹೊಂದಿಸುವ ಕೆಲಸ ನಡೆಯುತ್ತದೆ ಸಹ ತಿಳಿಸಿದೆ.

ಈ ಹಿಂದೆ ಅವತಾರನಲ್ಲಿ ಕೆಲವು ದೋಷಗಳು ಕಂಡುಬಂದಿತ್ತು. ಪರಿಣಾಮ ರೋಲ್ ಔಟ್ ಆದ ಕೂಡಲೇ ಕಂಪೆನಿಯು ಅದನ್ನು ಹಿಂತೆಗೆದುಕೊಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಎಲ್ಲಾ ಪ್ರಕ್ರಿಯೆ ಮುಗಿಸಿಕೊಂಡು ವಾಟ್ಸಾಪ್‌ಗೆ ಮತ್ತೊಮ್ಮೆ ಫೀಚರ್ ಅನ್ನು ಹೊರತರಲಾಗಿದೆ.

ಸ್ಟಿಕ್ಕರ್ ಪ್ಯಾಕ್ ರಚನೆ:

ಇನ್ನು ವಾಟ್ಸಾಪ್‌ನಲ್ಲಿ ಅವತಾರ್‌ ಅನ್ನು ಕಾನ್ಫಿಗರ್ ಮಾಡಿದ ನಂತರ ಆಟೋಮ್ಯಾಟಿಕ್‌ ಆಗಿ ಸ್ಟಿಕ್ಕರ್ ಪ್ಯಾಕ್ ರಚನೆಯಾಗಲಿದ್ದು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆ ಎಲ್ಲಾ ಸ್ಟಿಕ್ಕರ್‌ಗಳನ್ನು ಹಂಚಿಕೊಳ್ಳಬಹುದು. ಅದಲ್ಲದೆ ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋವಾಗಿಯೂ ಬಳಕೆ ಮಾಡಿಕೊಳ್ಳಬಹುದು.

ಅಪ್‌ಡೇಟ್‌ ಮಾಡಿ:

ಇನ್ನೂ ಈ ಫೀಚರ್ಸ್‌ ಬಳಕೆ ಮಾಡಲು ವಾಟ್ಸಾಫ್‌ ಸೆಟ್ಟಿಂಗ್‌ನಲ್ಲಿ ಪರಿಶೀಲನೆ ಮಾಡಬೇಕಿದೆ. ಒಂದು ವೇಳೆ ಅವತಾರ್‌ ಎಂಬ ಆಯ್ಕೆ ಕಾಣಿಸಿಲ್ಲ ಎಂದರೆ ಅಪ್‌ಡೇಟ್ ಮಾಡಿಕೊಳ್ಳಬೇಕು.

ವಾಟ್ಸಾಪ್‌ನ ಇತ್ತೀಚಿನ ನವೀಕರಣಗಳೇನು?:

ಯಾರಿಗೂ ಗೊತ್ತಿಲ್ಲದೆ ಹಾಗೇ ವಾಟ್ಸಾಪ್‌ನಿಂದ ಇದೀಗ ಹೊರ ನಡೆಯಬಹುದು. ಅದಲ್ಲದೆ ಸಂದೇಶಗಳನ್ನು ಒಮ್ಮೆ ಮಾತ್ರ ವೀಕ್ಷಿಸಲು ಹಾಗೂ ಸ್ಕ್ರೀನ್‌ಶಾಟ್ ಅನ್ನು ನಿರ್ಬಂಧಿಸಲು ಸಹ ಬಳಕೆದಾರರಿಗೆ ಅನುಮತಿ ನೀಡಿದೆ. ಈ ವೈಶಿಷ್ಟ್ಯದ ಹೊರತಾಗಿ, ಆಯ್ದ ಬೀಟಾ ಪರೀಕ್ಷಕರಿಗೆ ಮೆಸೇಜ್ ಯುವರ್ಸೆಲ್ಫ್ ಎಂಬ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.

ಗ್ರೂಪ್‌ ಚಾಟ್‌ನಲ್ಲಿ ಪ್ರೋಪೈಲ್ ಫೋಟೋ:

ಗ್ರೂಪ್ ಚಾಟಿಂಗ್‌ನಲ್ಲಿ ಮತ್ತಷ್ಟು ಸುಧಾರಣೆಗಳು ತಂದಿದ್ದು, ಇನ್ನು ಮುಂದೆ ಗ್ರೂಪ್ ಚಾಟ್‌ನಲ್ಲಿ ಪ್ರೊಫೈಲ್ ಫೋಟೋಗಳನ್ನು ಸೇರಿಸುತ್ತದೆ ಎಂದು ವರದಿಯಾಗಿದೆ. ಇದರ ಅನ್ವಯ ಇನ್ನು ಮುಂದೆ ಹೆಸರಿನ ಬದಲು ಫೋಟೋಗಳನ್ನೇ ನೋಡಿಕೊಂಡು ಗ್ರೂಪ್‌ನಲ್ಲಿ ಸಂವಹನ ನಡೆಸಬಹುದಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..