ನ್ಯೂಸ್ ಆ್ಯರೋ : ರಾಜ್ಯ ಸರ್ಕಾರ ಮತ್ತೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ.
ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ರವಿ ಚನ್ನಣ್ಣನವರ್ ಸೇರಿದಂತೆ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡವರು ಮತ್ತು ಆದೇಶ ಮಾಡಲಾದ ಸ್ಥಳ :
ಡಾ.ಎಂ. ಅಬ್ದುಲ್ ಸಲೀಂ – ಎಡಿಜಿಪಿ, ವಿಶೇಷ ಆಯುಕ್ತರು(ಸಂಚಾರ) ಬೆಂಗಳೂರು ನಗರ ಉಮೇಶಕುಮಾರ್ – ಆಡಳಿತ ವಿಭಾಗ, ಎಡಿಜಿಪಿ ದಿವ್ಯಜ್ಯೋತಿ ರೇ – ಐಜಿಪಿ, ಮಾನವ ಹಕ್ಕುಗಳು ರಮಣ ಗುಪ್ತ – ಡಿಐಜಿ ಮತ್ತು ಜಂಟಿ ಆಯುಕ್ತರು, ಗುಪ್ತಚರ, ಬೆಂಗಳೂರು
ರವಿ ಡಿ. ಚೆನ್ನಣ್ಣನವರ್ -ಎಂಡಿ, ಕಿಯೋನಿಕ್ಸ್ ಬಿ.ಎಸ್. ಲೋಕೇಶ್ ಕುಮಾರ್ -ಡಿಐಜಿ, ಬಳ್ಳಾರಿ ಡಾ.ಚಂದ್ರಗುಪ್ತ – ಡಿಐಜಿ, ಪಶ್ಚಿಮ ವಲಯ ಡಾ. ಶರಣಪ್ಪ -ಜಂಟಿ ಪೋಲಿಸ್ ಆಯುಕ್ತರು, ಅಪರಾಧ ವಿಭಾಗ, ಬೆಂಗಳೂರು ಎಂ.ಎನ್. ಅನುಚೇತ್ -ಜಂಟಿ ಪೋಲಿಸ್ ಆಯುಕ್ತರು, ಸಂಚಾರ ಬಿ. ರಮೇಶ್ -ಮೈಸೂರು ಪೊಲೀಸ್ ಆಯುಕ್ತರು
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..