ನ್ಯೂಸ್ ಆ್ಯರೋ : ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕದ ಬಳಿಕ ದೇಶದಲ್ಲಿ ಹೃದಯಘಾತಗಳು ಹೆಚ್ಚಾಗುತ್ತಿದ್ದು ಈಗಾಗಲೇ ನೂರಾರು ಮಂದಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಕೆಲವರ ಪ್ರಾಣ ಸಮಯ ಪ್ರಜ್ಞೆಯಿಂದ ಉಳಿದಿದೆ. ಮಥುರಾ ರೈಲ್ವೆ ನಿಲ್ದಾಣದಲ್ಲಿ ಇಂತಹುದೇ ಹೃದಯಾಘಾತಕ್ಕೆ ಒಳಗಾದ ಪತಿಗೆ ಪತ್ನಿ ಸಮಯ ಪ್ರಜ್ಞೆಯಿಂದ ಮರು ಜೀವ ಕೊಟ್ಟ ಘಟನೆ ನಡೆದಿದೆ.
ಶನಿವಾರ ಬೆಳಗ್ಗೆ ಮಥುರಾ ಜಂಕ್ಷನ್‌ನಲ್ಲಿ 70 ವರ್ಷದ ಕೇಶವನ್ ಎಂಬುವವರಿಗೆ ಹೃದಯಾಘಾತವಾಗಿತ್ತು. ಆಗ ಜೊತೆಗಿದ್ದ ಪತ್ನಿ ದಯಾ ಧೃತಿಗೆಡದೆ ತಲೆ ಓಡಿಸಿ ಪತಿಯ ಪ್ರಾಣ ಉಳಿಸಿದ್ದು, ರೈಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಆರ್ ಪಿ ಎಫ್ ಸಿಬಂದಿ ಕೂಡ ನೆರವಿಗೆ ಬಂದಿದ್ದಾರೆ.
ಸುಮಾರು 10 ನಿಮಿಷಗಳ ಕಾಲ ತನ್ನ ಬಾಯಿಯ ಮೂಲಕ ಪತಿಗೆ ಉಸಿರು ತುಂಬಿಸಿ ನಿಂತ ಹೃದಯ ಬಡಿತಕ್ಕೆ ಮತ್ತೆ ಚಾಲನೆ ನೀಡಲು ಯಶಸ್ವಿಯಾಗಿದ್ದಾರೆ. ಮಥುರಾ ಜಂಕ್ಷನ್‌ನಲ್ಲಿ 70 ವರ್ಷದ ಕೇಶವನ್ ಎಂಬುವವರಿಗೆ ಹೃದಯಾಘಾತವಾಗಿತ್ತು.
ಆಗ ಜೊತೆಗಿದ್ದ ಪತ್ನಿ ದಯಾ ಧೃತಿಗೆಡದೆ ತಲೆ ಓಡಿಸಿ ಪತಿಯ ಪ್ರಾಣ ಉಳಿಸಿದ್ದು, ರೈಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಆರ್ ಪಿ ಎಫ್ ಸಿಬಂದಿ ಕೂಡ ನೆರವಿಗೆ ಬಂದಿದ್ದಾರೆ. ಗಂಡನ ಹೃದಯ ಬಡಿತ ಮತ್ತು ಉಸಿರಾಟವು ಮುಂದುವರೆದಿದೆ. ಆರ್‌ಪಿಎಫ್ ಸಿಬ್ಬಂದಿ ಅವರ ಕೈ ಕಾಲುಗಳಿಗೆ ಮಸಾಜ್ ಮಾಡುತ್ತಲೇ ಇದ್ದರು.ಇದರಿಂದಾಗಿ ಕೇಶವನ್ ಅವರ ಪ್ರಾಣ ರಕ್ಷಣೆಯಾಗಿದೆ.
ಕೇಶವನ್ ಅವರಿಗೆ ಪ್ರಜ್ಞೆ ಬಂದ ತಕ್ಷಣ ಆರ್‌ಪಿಎಫ್ ಸಿಬ್ಬಂದಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಕೆ ಕಂಡುಕೊಂಡಿದ್ದಾರೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..