ಮುರುಘಾ ಶ್ರೀ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿದೆ ಬೆಚ್ಚಿ ಬೀಳಿಸುವ ಸಂಗತಿ – ಡ್ರಗ್ಸ್ ನೀಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡುತ್ತಿದ್ದ ಕಾಮುಕ, ಬಯಲಾಯ್ತು ಸ್ವಾಮೀಜಿಯ ಕಾಮಚೇಷ್ಟೆ

ನ್ಯೂಸ್ ಆ್ಯರೋ : ಮುರುಘಾ ಮಠದ ಶ್ರೀಗಳ ವಿರುದ್ಧ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿನ ಆಘಾತಕಾರಿ ವಿಚಾರಗಳನ್ನು ತಿಳಿದು ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ.
2 ಸೆಟ್‌ಗಳಂತೆ ಸಲ್ಲಿಸಿದ 342 ಪುಟಗಳ ಚಾರ್ಜ್ ಶೀಟ್‌ನಲ್ಲಿ ಮುರುಘಾಶ್ರೀ, ಲೇಡಿ ವಾರ್ಡನ್ (ರಶ್ಮಿ), ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಮಠದ ಉತ್ತರಾಧಿಕಾರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಆದರೆ ವಕೀಲ ಗಂಗಾಧರಯ್ಯ ಭಾಗಿಯಾಗಿರುವ ಮಾಹಿತಿ ಇಲ್ಲ ಎಂದು ಉಲ್ಲೇಖಿಸಲಾಗಿದ್ದು, ಈ ಬಗ್ಗೆಯೂ ತನಿಖೆಯನ್ನು ನಡೆಸಲಾಗುತ್ತಿದೆ.
ಶ್ರೀಗಳು ವಾರ್ಡನ್ ರಶ್ಮಿ ಮೂಲಕ ಬಾಲಕಿಯರನ್ನು ರೂಂ ಗೆ ಕರೆಸಿಕೊಳ್ಳುತ್ತಿದ್ದರು. ಹಣ್ಣು ಹಾಗೂ ಚಾಕಲೇಟ್‌ಗಳಲ್ಲಿ ಔಷಧಿಯನ್ನು ನೀಡಿ ಅವರ ಮೇಲೆ ಶ್ರೀಗಳು ಅತ್ಯಾಚಾರವನ್ನು ಎಸಗುತ್ತಿದ್ದರು ಎಂದು ಎಳೆ ಎಳೆಯಾಗಿ ಸ್ವಾಮೀಜಿಗಳ ಅನಾಚಾರವನ್ನು ಸಂತ್ರಸ್ತರು ಬಿಚ್ಚಿಟ್ಟಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿರುವ ಪ್ರಮುಖ ಅಂಶಗಳು:
- ಶ್ರೀಗಳು ತನ್ನ ಬಳಿಗೆ ಇಬ್ಬರು ಹುಡುಗಿಯರನ್ನು ಕಳುಹಿಸುವಂತೆ ವಾರ್ಡನ್‌ಗೆ ಚೀಟಿ ಕಳುಹಿಸುತ್ತಿದ್ದರು. ನಂತರ ಶ್ರೀಗಳು ಹೇಳಿದ ಇಬ್ಬರು ಹುಡುಗಿಯರನ್ನು ವಾರ್ಡ್‌ನ್ ರಶ್ಮಿ ಕಳುಹಿಸುತ್ತಿದ್ದಳು.
- ಟ್ಯೂಶನ್ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಕರೆಸಿಕೊಳ್ಳುತ್ತಿದ್ದ ವಾರ್ಡನ್ ರಶ್ಮಿ ನಂತರ ಶ್ರೀಗಳ ಕೋಣೆಗಳಿಗೆ ಅವರನ್ನು ಕಳುಹಿಸುತ್ತಿದ್ದಳು. ನಂತರ ಕಸ ಹೊಡೆಯುವ ನೆಪವನ್ನು ಶ್ರೀಗಳು ಹೇಳುತ್ತಿದ್ದರು.
- ವಿದ್ಯಾರ್ಥಿನಿಯರಿಗೆ ಹಣ್ಣು– ಹಂಪಲುಗಳನ್ನು ನೀಡುವ ನೆಪದಲ್ಲಿ ಅವರ ಅಂಗಾಂಗಗಳನ್ನು ಮುಟ್ಟಿ, ನಂತರ ಅವರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದರು.
- ಶ್ರೀಗಳು ನಮ್ಮ ಎದುರು ಮದ್ಯಪಾನ ಸೇವಿಸುತ್ತಿದ್ದು, ಅವರಿಗೆ ಗಂಗಾಧರ್, ಬಸವಾದಿತ್ಯ ಸ್ವಾಮಿ, ರಶ್ಮಿ ಪರಮಶಿವಯ್ಯನವರು ಬೆಂಬಲ ನೀಡುತ್ತಿದ್ದರು.
- ಮನೆಯವರಿಗೆ ಸಹಾಯ ಮಾಡುವ ನೆಪ ಹೇಳಿ ಅತ್ಯಾಚಾರದ ಬಗ್ಗೆ ಹೇಳದಂತೆ ವಿದ್ಯಾರ್ಥಿನಿಯರಿಗೆ ವಾರ್ಡನ್ ರಶ್ಮಿ ಬ್ಲಾಕ್‌ಮೇಲ್.
- ಅದಲ್ಲದೆ ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ಸ್ವಾಮೀಜಿ ಕಡೆಯವರು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮುರುಘಾ ಶ್ರೀ ವಿರುದ್ಧ ಯಡಿಯೂರಪ್ಪ ಗುಡುಗು: ಸಭೆ ಕರೆದ ಬಸವ ಪ್ರಭು ಸ್ವಾಮೀಜಿ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪೋಕ್ಸೋ ಪ್ರಕರಣದ ಮುರುಘಾ ಶ್ರೀ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮುರುಘಾ ಮಠದಲ್ಲಿ ತಳಮಳ ಶುರುವಾಗಿದ್ದು, ಸಭೆಯನ್ನು ಕರೆಯಲಾಗಿದೆ.
ಉಡುಪಿಯಲ್ಲಿ ಬಿಎಸ್‌ವೈ ಹೇಳಿಕೆ ನೀಡಿ, ‘ಮುರುಘಾ ಶ್ರೀಗಳು ಕ್ಷಮಿಸಲಾರದ ಅಕ್ಷಮ್ಯ ಅಪರಾಧವನ್ನು ಮಾಡಿದ್ದಾರೆ. ಈ ಕೆಳಮಟ್ಟಕ್ಕೆ ಇಳಿಯುತ್ತಾರೆಂದು, ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಅಗ್ರಹಿಸಿದರು’. ಇದೀಗ ಬಸವ ಪ್ರಭು ಸ್ವಾಮೀಜಿ ಮಠದ ಪೂಜೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ಯಡಿಯೂರಪ್ಪ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಮಠದಲ್ಲಿ ಸಭೆಯನ್ನು ಕರೆದಿದ್ದಾರೆ.
ಸಭೆಯಲ್ಲಿ ಪಾಲ್ಗೊಳ್ಳಲು ಮಾದಾರಚೆನ್ನಯ್ಯ ಸ್ವಾಮೀಜಿ ಸೇರಿದಂತೆ ಹಲವು ಪೀಠಾಧಿಪತಿಗಳು ಹಿಂಜರಿದಿದ್ದಾರೆ. ಮುರುಘಾ ಮಠದ ಬಗ್ಗೆ ಕೀಳು ಅಭಿಪ್ರಾಯವಿರುವುದರಿಂದ ಸಭೆಗೆ ಹೋಗಬೇಕಾ ಅಥವಾ ಸಭೆಯಿಂದ ದೂರ ಉಳಿಯಬೇಕಾ ಎಂಬ ಜಿಜ್ಞಾಸೆಯಲ್ಲಿ ಮಠಾಧಿಪತಿಗಳಿದ್ದಾರೆ.
ಮೊದಲ ಭಾರೀ ಶ್ರೀಗಳ ವಿರುದ್ಧ ಗುಡುಗಿದ ಬಿಎಸ್‌ವೈ:
ಪೋಕ್ಸೋ ಪ್ರಕರಣದಲ್ಲಿ ಬಂಧಿಯಾಗಿರುವ ಮುರುಘಾ ಶರಣ ವಿರುದ್ಧ ಮೊದಲ ಭಾರೀ ಯಡಿಯೂರಪ್ಪ ಉಡುಪಿಯಲ್ಲಿ ಹೇಳಿಕೆ ನೀಡಿದ್ದರು. ಶ್ರೀಗಳು ಕ್ಷಮಿಸಲಾರದ ಅಕ್ಷಮ್ಯ ಅಪರಾಧವನ್ನು ಮಾಡಿದ್ದು, ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಅವರು ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆಂದು ನಾವು ತಿಳಿದಿರಲಿಲ್ಲ. ಅವರಿಗೆ ಸೂಕ್ತ ಶಿಕ್ಷಯಾಗಬೇಕು ಎಂದು ಅಗ್ರಹಿಸಿದರು.