1. Home
  2. Viral
  3. Video
  4. ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಲು ಸಾಧ್ಯವೇ..? – ಚೆಫ್ ವಿಕಾಸ್ ಖನ್ನಾ ಸುಲಭ ಉಪಾಯ ಹೇಳಿದ್ದಾರೆ, ಈ ವಿಡಿಯೋ ನೋಡಿ..!!

ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಲು ಸಾಧ್ಯವೇ..? – ಚೆಫ್ ವಿಕಾಸ್ ಖನ್ನಾ ಸುಲಭ ಉಪಾಯ ಹೇಳಿದ್ದಾರೆ, ಈ ವಿಡಿಯೋ ನೋಡಿ..!!

ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಲು ಸಾಧ್ಯವೇ..? – ಚೆಫ್ ವಿಕಾಸ್ ಖನ್ನಾ ಸುಲಭ ಉಪಾಯ ಹೇಳಿದ್ದಾರೆ, ಈ ವಿಡಿಯೋ ನೋಡಿ..!!
0

ನ್ಯೂಸ್ ಆ್ಯರೋ : ಇದು ಸ್ಮಾರ್ಟ್ ಯುಗ. ಜನ ಎಲ್ಲಾ ಕೆಲಸಗಳನ್ನು ಸ್ಮಾರ್ಟ್ ಆಗಿ, ವೇಗವಾಗಿ ಮುಗಿಸಲು ಬಯಸುತ್ತಾರೆ. ಅದ್ರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಬರುವ ಕೆಲವು ವಿಡಿಯೋಗಳು ಜನರಿಗೆ ಒಳ್ಳೊಳ್ಳೆ ಟಿಪ್ಸ್ ನೀಡುತ್ತಿರುತ್ತವೆ. ಅಂತಹುದೆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಖ್ಯಾತ ಚೆಫ್ ವಿಕಾಸ್ ಖನ್ನಾ ಅವರು ಚಿಪ್ಪಿನಿಂದ ತೆಂಗಿನಕಾಯಿ ಬೇರ್ಪಡಿಸುವ ಸುಲಭ ಮಾರ್ಗವನ್ನು ಹೇಳಿದ್ದಾರೆ. ನೆಟ್ಟಿಗರೂ ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.

ತೆಂಗಿನಕಾಯಿ ಸಿಪ್ಪೆ ತೆಗೆಯುವುದೇ ಕಷ್ಟ ಅಂದುಕೊಂಡ್ರೆ, ಅದನ್ನು ಒಡೆದು ಚಿಪ್ಪಿನಿಂದ ಕಾಯಿ ಬೇರ್ಪಡಿಸುವುದು ಮತ್ತೊಂದು ತಲೆನೋವು. ಅದು ಬೇಗನೆ ಆಗುವ ಕೆಲಸವೂ ಅಲ್ಲ. ಈಗಿನ ಬ್ಯುಸಿ ದುನಿಯಾದಲ್ಲಿ ಜನರಿಗೆ ಇದು ಕಿರಿಕಿರಿ ಅನಿಸೋದು ಸುಳ್ಳಲ್ಲ. ಆದ್ರೆ ವಿಕಾಸ್ ಖನ್ನಾ ಹೇಳಿರುವ ಈ ತಂತ್ರದಿಂದ ನೀವು ಸುಲಭವಾಗಿ ತೆಂಗಿನಕಾಯಿಯನ್ನು ಚಿಪ್ಪಿನಿಂದ ಬೇರ್ಪಡಿಸಬಹುದು.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಚೆಫ್ ವಿಕಾಸ್ ಖನ್ನಾ ಅವರು ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸುತ್ತಾರೆ. ತೆಂಗಿನ ಕಾಯಿಯನ್ನು ಒಡೆದು, ಸ್ಟವ್ ಮೇಲೆ ಇಡುತ್ತಾರೆ. ಸುಮಾರು ಅರ್ಧ ನಿಮಿಷದ ಬಳಿಕ ತೆಂಗಿನ ಗಡಿಯನ್ನು ತಣ್ಣೀರಿನಲ್ಲಿ ಹಾಕುತ್ತಾರೆ. ಬಳಿಕ ಸುಲಭವಾಗಿ ಚಿಪ್ಪಿನಿಂದ ಕಾಯಿ ಬೇರ್ಪಡಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಚೆಫ್ ವಿಕಾಸ್ ಖನ್ನಾ ಅವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದ್ದಾಗ ಮಹಿಳೆಯೊಬ್ಬರು ಈ ತಂತ್ರವನ್ನು ಅನುಸರಿಸಿರುವುದನ್ನು ನೋಡಿದ್ದೆ ಅಂತ ವಿಕಾಸ್ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 50,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ವಿಡಿಯೋ ನೋಡಿದ ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಾಹ್… ಎಷ್ಟು ಸರಳ ವಿಧಾನವಿದು. ನಾವೆಲ್ಲಾ, ಸುತ್ತಿಗೆ, ಚಮಚ, ಸ್ಕ್ರೂಡ್ರೈವರ್, ಚಾಕು ಇನ್ನೂ ಏನೆಲ್ಲಾ ಬಳಸಿ ಸರ್ಕಸ್ ಮಾಡುತ್ತಿದ್ದೆವು. ಇಂಥ ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು ಸರ್.. ನಾವು ಈ ತಂತ್ರವನ್ನು ಖಂಡಿತವಾಗಿಯೂ ಬಳಸಿ ನೋಡುತ್ತೇವೆ ಎಂದು ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಮತ್ತೇಕೆ ತಡ? ನೀವೂ ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ನೋಡಿ..

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..