1. Home
  2. Viral
  3. Video
  4. ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್
0

ನ್ಯೂಸ್ ಆ್ಯರೋ : ಹಿಂದೂ ಧರ್ಮದಲ್ಲಿ ಭಗವಾನ್ ಶ್ರೀ ರಾಮನಿಗೆ ತನ್ನದೇ ಆದ ಮಹತ್ವವಿದೆ. ರಾಮಾಯಣ ಕಾಲದಿಂದ ಇಂದಿನವರೆಗೂ ಶ್ರೀರಾಮನಿಗೆ ಭಾರತೀಯ ನೆಲ ಇನ್ನಿಲ್ಲದಂತೆ ಭಕ್ತಿ, ಗೌರವ ಸಮರ್ಪಿತವಾಗುತ್ತಿದೆ. ಅದೆಷ್ಟೋ ಭಕ್ತಿಗೀತೆಗಳು ಶ್ರೀರಾಮನ ಜನ್ಮ, ಆತನ ಸಾಧನೆ, ಆತನ ಜೀವನದ ನೈತಿಕ ಜೀವನವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಲೇ ಬಂದಿವೆ. ಇದೀಗ ಸದ್ದಿಲ್ಲದೇ ಕರಾವಳಿಯ ಯುವಕರ ಹೊಸ ತಂಡವೊಂದು ಜೈ ಜೈ ಶ್ರೀ ರಾಮ್ ಹೆಸರಿನ ಭಕ್ತಿಗೀತೆಯೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿದ್ದು, ವೈರಲ್ ಆಗುವತ್ತ ದಾಪುಗಾಲಿಟ್ಟಿದೆ.

ಭಾರತ್ ಕಾ ಬಚ್ಚಾ ಬಚ್ಚಾ ಜೈ ಶ್ರೀ ರಾಮ್ ಬೋಲೇಗಾ ಹಾಡಿನ ಸ್ಪೂರ್ತಿ ಪಡೆದಿದ್ದ ಈ ತಂಡ ಅಂತಹದೇ ಹಾಡೊಂದನ್ನು ರಚಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಹಾಡಿನ ನಿರ್ಮಾಣವನ್ನು ಶ್ರೀಕಾಂತ್ ಬೈಂದೂರ್ ಅವರು ಮಾಡಿದ್ದು, ಸಾಹಿತ್ಯ ಮತ್ತು ನಿರ್ದೇಶನದ ಹೊಣೆ ಪ್ರವೀಣ್ ಜಯ ವಿಟ್ಲ ನಿಭಾಯಿಸಿದ್ದಾರೆ.

ಇನ್ನು ಈ ಹಾಡಿಗೆ ಕವನ ಶ್ರೀಕಾಂತ್, ಅಶ್ವಿನಿ ಶ್ರೇಯಾ ವಿಟ್ಲ ಮತ್ತು ಪ್ರವೀಣ್ ಜಯ ವಿಟ್ಲ ಅವರು ಧ್ವನಿ ನೀಡಿದ್ದಾರೆ. ಆದಿಶಕ್ತಿ ಫಿಲಂಸ್ ನ ದೇವಿಪ್ರಸಾದ್ ರಾವ್ ಅವರು ಕ್ಯಾಮೆರಾ ಕೈಚಳಕ ತೋರಿದ್ದು, ರಮೇಶ್ ಪುಣಚ ಅವರು ನೃತ್ಯ ನಿರ್ದೇಶನ ನೀಡಿದ್ದಾರೆ.

ಈ ಹಾಡಿನ ಚಿತ್ರೀಕರಣವನ್ನು ಪುಣಚ, ಅಳಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರವೇರಿಸಲಾಗಿದ್ದು, ಪ್ರವೀಣ್ ಜಯ ವಿಟ್ಲ, ಅಶ್ವಿನಿ ಶ್ರೇಯಾ ವಿಟ್ಲ, ಕವನ ಶ್ರೀಕಾಂತ್, ರಮೇಶ್ ಪುಣಚ, ಅದಿತಿ ವಿಟ್ಲ (ರಾಮನ ಪಾತ್ರದಲ್ಲಿ), ಶ್ರೇಯ ಮಲ್ಲ (ಲಕ್ಷ್ಮಣನ ಪಾತ್ರದಲ್ಲಿ), ಕಲಾಸ್ಮಿತಾ (ಸೀತೆ ಪಾತ್ರದಲ್ಲಿ) ನಟಿಸಿದ್ದಾರೆ. ಅಲ್ಲದೇ ಮಹಿಷ ಮರ್ದಿನಿ ಮಹಿಳಾ ಕುಣಿತ ಭಜನಾ ತಂಡ ಸಾಥ್ ನೀಡಿದೆ.

ಈ ಹಾಡು KAVANA SRIKANTH YOUTUBE CHANNEL ನಲ್ಲಿ ಬಿಡುಗಡೆಯಾಗಿದ್ದು, ಅಶ್ವತ್ಥ ನಾರಾಯಣ ಭಜನಾ ಮಂದಿರ, ಅಳಿಕೆ ಇಲ್ಲಿ ದಿನಾಂಕ 12.11.2022 ರಂದು 6 ಗಂಟೆಗೆ ಖ್ಯಾತ ಗಾಯಕ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಇವರು ಬಿಡುಗಡೆಗೊಳಿಸಿದ್ದಾರೆ.

ಬಿಡುಗಡೆ ಸಮಾರಂಭದಲ್ಲಿ ಶ್ರೀ ಅಶೀಕ್ ಕುಮಾರ್ ಬೈರಿಕಟ್ಟೆ, ಶ್ರೀ ಡಿ. ಶಿವರಾಮ್ ಬೈರಿಕಟ್ಟೆ, ಶ್ರೀ ಉದಯ ಜಿ ಭಟ್ ಬೈರಿಕಟ್ಟೆ, ಖ್ಯಾತ ಸಾಹಿತ್ಯಗಾರರಾದ ಅನಿಲ್‌ ವಡಗೇರಿ ಹಾಗೂ ರಮೇಶ್ ಪುಣಚ ಉಪಸ್ಥಿತರಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..