1. Home
  2. Viral
  3. Video
  4. Viral Video : ಹೆಣ್ಣು ಮಕ್ಳೇ ಸ್ಟ್ರಾಂಗ್ ಗುರೂ – ಚಾಕು ಹಿಡಿದು ಬ್ಯಾಂಕ್ ಗೆ ನುಗ್ಗಿ ದರೋಡೆಗೆ ಯತ್ನಿಸಿದವನನ್ನು ಹಿಮ್ಮೆಟ್ಟಿಸಿದ ಮಹಿಳಾ ಬ್ಯಾಂಕ್ ಮ್ಯಾನೇಜರ್..!!

Viral Video : ಹೆಣ್ಣು ಮಕ್ಳೇ ಸ್ಟ್ರಾಂಗ್ ಗುರೂ – ಚಾಕು ಹಿಡಿದು ಬ್ಯಾಂಕ್ ಗೆ ನುಗ್ಗಿ ದರೋಡೆಗೆ ಯತ್ನಿಸಿದವನನ್ನು ಹಿಮ್ಮೆಟ್ಟಿಸಿದ ಮಹಿಳಾ ಬ್ಯಾಂಕ್ ಮ್ಯಾನೇಜರ್..!!

Viral Video : ಹೆಣ್ಣು ಮಕ್ಳೇ ಸ್ಟ್ರಾಂಗ್ ಗುರೂ – ಚಾಕು ಹಿಡಿದು ಬ್ಯಾಂಕ್ ಗೆ ನುಗ್ಗಿ ದರೋಡೆಗೆ ಯತ್ನಿಸಿದವನನ್ನು ಹಿಮ್ಮೆಟ್ಟಿಸಿದ ಮಹಿಳಾ ಬ್ಯಾಂಕ್ ಮ್ಯಾನೇಜರ್..!!
0

ನ್ಯೂಸ್‌ ಆ್ಯರೋ‌ : ಹೆಣ್ಣು ಮಕ್ಳೇ ಸ್ಟ್ರಾಂಗ್ ಗುರೂ ಅನ್ನೋ ಹಾಡಿನ ಸಾಲುಗಳು ಆಗಾಗ ನೆನಪಾಗೋದು ಹೆಣ್ಮಕ್ಳು ಧೈರ್ಯ ತೋರೋ ಘಟನೆಗಳು ನಡೆದಾಗ.‌ ಇದೀಗ ಅಂಥಾದ್ದೇ ಘಟನೆ ನಡೆದಿದ್ದು, ದರೋಡೆ ಮಾಡಲು ಚಾಕು ಹಿಡಿದಯ ಬ್ಯಾಂಕ್​ಗೆ ಬಂದವನನ್ನು ಅದೇ ಬ್ಯಾಂಕ್​​ನ ಮಹಿಳಾ ಮ್ಯಾನೇಜರ್​​ ಕಟ್ಟಿಂಗ್ ಫ್ಲೈಯರ್ ನಿಂದ ದಿಟ್ಟತನದಿಂದ ಎದುರಿಸಿ, ಹೆದರಿಸಿದ ಘಟನೆ ರಾಜಸ್ಥಾನದಿಂದ ವರದಿಯಾಗಿದೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ದರೋಡೆಕೋರನನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದ ಮಹಿಳಾ ಮ್ಯಾನೇಜರ್​ ಪೂನಮ್ ಗುಪ್ತಾ ಎನ್ನಲಾಗಿದ್ದು, ಆಕೆಯನ್ನು ದುರ್ಗಿ ಎಂದೆಲ್ಲ ಹೊಗಳುತ್ತಿದ್ದಾರೆ. ಅಷ್ಟು ದೊಡ್ಡ ಚಾಕು ಹಿಡಿದು ಬಂದವನನ್ನು ಈಕೆ ಒಂದು ಕಟ್ಟಿಂಗ್ ಪ್ಲೈಯರ್​ ಹಿಡಿದು ಹೆದರಿಸಿದರಲ್ಲ ಎಂದು ಆಶ್ಚರ್ಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಘಟನೆ?

ವ್ಯಕ್ತಿಯೊಬ್ಬ ಮುಖಕ್ಕೆ, ತಲೆಗೆ ಬಟ್ಟೆ​ ಕಟ್ಟಿಕೊಂಡು ರಾಜಸ್ಥಾನದ ಮುರುಧಾರಾ ಗ್ರಾಮೀಣ ಬ್ಯಾಂಕ್​ನೊಳಗೆ ನುಸುಳುತ್ತಾನೆ. ಆತ ತನ್ನನ್ನು ತಾನು ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯಿ ಕಡೆಯವನು ಎಂದು ಹೇಳಿಕೊಂಡು ದರೋಡೆಗೆ ಬಂದಿದ್ದ. ಕೈಯಲ್ಲಿ ದೊಡ್ಡದಾದ ಚಾಕುವೂ ಇತ್ತು. ಆತ ಬ್ಯಾಂಕ್​ಗೆ ಆಗಮಿಸುತ್ತಿದ್ದಂತೆ ಹೊರಗೆ ಗದ್ದಲ, ಗಲಾಟೆ ಏರ್ಪಟ್ಟಿತ್ತು.

ಗಲಾಟೆ ಕೇಳುತ್ತಿದ್ದಂತೆ ಕ್ಯಾಬಿನ್​ನಲ್ಲಿದ್ದ ಪೂನಮ್​ ಗುಪ್ತಾ ಹೊರಗೆ ಓಡಿ ಬಂದರು. ಆಗ ದರೋಡೆಕೋರ ಅವರ ಎದುರೂ ಚಾಕು ಹಿಡಿದ. ಆದರೆ ಆಕೆ ಧೈರ್ಯ ಕಳೆದುಕೊಳ್ಳಲಿಲ್ಲ. ‘ಇರುವ ಹಣವನ್ನೆಲ್ಲ ಕೊಟ್ಟುಬಿಡಿ’ ಎನ್ನುತ್ತ ಒಳಗಿನ ಕೋಣೆಗೆ ಹೋದ. ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಬ್ಯಾಂಕ್​ ಸಿಬ್ಬಂದಿಯೊಬ್ಬರು ಆತನನ್ನು ಹಿಡಿಯಲು ಯತ್ನಿಸಿದರು. ಆಗ ತುಸು ತಳ್ಳಾಟ ನಡೆಯಿತು.

ಈ ವೇಳೆ ಅವನ ಜೇಬಿನಲ್ಲಿದ್ದ ಕಟ್ಟಿಂಗ್​ ಪ್ಲೈಯರ್ (ತಂತಿಗಳನ್ನೆಲ್ಲ ಕತ್ತರಿಸಲು ಬಳಸುವಇಕ್ಕಳ)​ ಕೆಳಕ್ಕೆ ಬಿತ್ತು. ಪೂನಮ್​ ಕ್ಷಣ ಮಾತ್ರದಲ್ಲಿ ಅದನ್ನೆತ್ತಿಕೊಂಡು ಆತನನ್ನು ಹೆದರಿಸಿದ್ದಾರೆ. ಅಷ್ಟರಲ್ಲಿ ಉಳಿದವರೂ ಒಟ್ಟಾಗಿ ಅವನನ್ನು ಓಡಿಸಿದ್ದಾರೆ. ಬ್ಯಾಂಕ್​​ನ ಮುಖ್ಯ ಬಾಗಿಲನ್ನು ಮುಚ್ಚಿ, ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ದರೋಡೆಕೋರನ ಹೆಸರು ಲ್ಯಾವಿಶ್​ ಅರೋರಾ ಎನ್ನಲಾಗಿದ್ದು, ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..